ನಟಿ ಅಪರ್ಣಾ ಸಾವಿನ ಕೇಸ್​ಗೆ ಸ್ಫೋಟಕ ತಿರುವು: ನಾದಿನಿ ಜತೆ ಗಂಡನ ಅಕ್ರಮ ಸಂಬಂಧದ ರಹಸ್ಯ ಬಯಲು

Aparna Nair
Published on

ತಿರುವನಂತಪುರಂ: ಮಲಯಾಳಂ ನಟಿ ಅಪರ್ಣಾ ನಾಯರ್​ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳ ಹೊರಬೀಳುತ್ತಲೇ ಇದೆ. ಆರಂಭದಲ್ಲಿ ಗಂಡನ ಕುಡಿತ ಚಟಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗಿತ್ತು. ಬಳಿಕ ಅಪರ್ಣಾ ಸಹ ಆತ್ಮಹತ್ಯೆಗೂ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಆಕೆಯ ಗಂಡ ಸಂಜಿತ್​ ಪೊಲೀಸರಿಗೆ ಹೇಳಿಕೆ ನೀಡಿದರು. ಇದೀಗ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ.

ಎರಡು ವರ್ಷಗಳ ಹಿಂದೆ ಅಪರ್ಣಾ ಪತಿ ಸಂಜಿತ್​ ಆಕೆಯ ಸಹೋದರಿ ಜತೆ ಅಂದರೆ ನಾದಿನಿ ಜತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಇದು ಅಪರ್ಣಾಗೆ ಗೊತ್ತಾಗಿ ಸಂಜಿತ್​ ವಿರುದ್ಧ ದೂರು ದಾಖಲಿಸಿದಳು. ಇದಾದ ಬಳಿಕ ಸಂಜಿತ್​ನನ್ನು ಪೊಲೀಸರು ಬಂಧಿಸಿದ್ದರು. ಹೀಗಿದ್ದರೂ ಸಂಜಿತ್​ನನ್ನು ಅಪರ್ಣಾ ಸ್ವೀಕರಿಸಿದ್ದಳು.

ಜೈಲಿನಿಂದ ಹೊರ ಬಂದ ಬಳಿಕ ಸಂಜಿತ್​, ತನ್ನ ಪತ್ನಿಯ ಮೇಲಿನ ಕೋಪದಿಂದ ಆಕೆಯ ಮೇಲೆ ದ್ವೇಷ ಸಾಧಿಸಲು ಆರಂಭಿಸಿದನು. ಪ್ರತಿದಿನ ಕುಡಿದು ಬಂದು ಜಗಳ ಆಡುತ್ತಿದ್ದ. ಅಲ್ಲದೆ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸದಂತೆ ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಅಪರ್ನಾ ನಟನೆಯನ್ನು ನಿಲ್ಲಿಸಿ ಆಸ್ಪತ್ರೆಯೊಂದರಲ್ಲಿ ಸ್ವಾಗತಕಾರಣಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಗಂಡ ಮಾತ್ರ ಪ್ರತಿದಿನ ಕುಡಿದು ಬಂದು ತೊಂದರೆ ಕೊಡುತ್ತಿದ್ದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಪರ್ಣಾ ಸಾವಿಗೆ ಸಂಜಿತ್ ಕಾರಣ ಎಂದು ಅಪರ್ಣಾ ತಾಯಿ ದೂರಿದ್ದಾರೆ.

ಸಂಜಿತ್​ ಹೇಳಿದ್ದೇನು?

ಕೇರಳದ ಕರಮಾನ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪರ್ಣಾ ಪತಿ ಸಂಜಿತ್​ ಹೇಳಿಕೆ ನೀಡಿದ್ದಾರೆ. ಘಟನೆ ನಡೆಯುವ ದಿನ ಅಪರ್ಣಾ ಕುಡಿದಿದ್ದಳು, ಇದೇ ವಿಚಾರಣಕ್ಕೆ ನನ್ನ ಮತ್ತು ಆಕೆಯ ನಡುವೆ ಜಗಳ ನಡೆದಿತ್ತು ಎಂದು ತಿಳಿಸಿದ್ದಾರೆ. ಅದೇ ದಿನ ಬೆಳಗ್ಗೆ ಅಟ್ಟುಕಾಲ್​ ದೇವಸ್ಥಾನಕ್ಕೆ ದಂಪತಿ ಭೇಟಿ ಮಾಡಿದ್ದಾರೆ. ಅಲ್ಲದೆ, ರಾತ್ರಿ ಓಣಂ ಆಚರಣೆಯನ್ನು ನೋಡಲು ನಿರ್ಧಾರ ಮಾಡಿದ್ದರು. ಆದರೆ, ಅಪರ್ಣಾ ಮದ್ಯ ಸೇವಿಸಿದ್ದನ್ನು ನೋಡಿದ ಸಂಜಿತ್, ಆಕೆಯನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಜಗಳದ ನಡುವೆ ಸಂಜಿತ್​ ತುಂಬಾ ಕೋಪದಿಂದ ತನ್ನ ಮಗಳನ್ನು ಕರೆದುಕೊಂಡು ಮನೆಯಿಂದ ಹೊರ ಹೋಗಿದ್ದಾನೆ. ಆತ ಮೆಟ್ಟುಕಾಡಕ್ಕೆ ತೆರಳಿದಾಗ ಫೋನ್​ ಕರೆ ಬಂದಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ಅರ್ಪಣಾ ಹೇಳಿದ್ದಾಳೆ. ಇದನ್ನು ಕೇಳಿದ ಕೂಡಲೇ ಸಂಜಿತ್​ ಮನಗೆ ಧಾವಿಸಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ಸಂಜಿತ್​ ಹೇಳಿದ್ದಾನೆ.

ಏನಿದು ಪ್ರಕರಣ?

ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಅಪರ್ಣಾ ಎರಡು ವಾರಗಳ ಹಿಂಷ್ಟೇ ರಾಜೀನಾಮೆ ನೀಡಿದ್ದರು. ಮನೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ, ಆ.31ರಂದು ಕುಟುಂಬಸ್ಥರಿಗೆ ತಿಳಿಸಿದ ಬಳಿಕ ಅದೇ ದಿನ ರಾತ್ರಿ 7.30ರ ಸುಮಾರಿಗೆ ಅಪರ್ಣಾ ಅವರನ್ನು ಕರಮಾನ ಕಿಲ್ಲಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಇದಾದ ಬಳಿಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದರು. ಆದರೆ, ಅಪರ್ಣಾ ಸಾವಿಗೆ ಗಂಡನ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಅಪರ್ಣಾ ಪಾಲಕರು ಆರೋಪ ಮಾಡಿದರು.

ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್​ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಗಂಡನ ಕುಡಿತದ ಚಟದಿಂದ ಮಾನಸಿಕ ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್​ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದರು.

ಅಂದಹಾಗೆ ಅಪರ್ನಾ ಅವರು ಮೇಘತೀರ್ಥಂ, ಮುದ್ದುಗೌವ್, ಅಚಾಯನ್ಸ್, ಕೊಡತಿ ಸಮಕ್ಷಮ್ ಬಾಲನ್ ವಕೀಲ್ ಹಾಗೂ ಕಲ್ಕಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಚಂದನಮಜ ಮತ್ತು ಆತ್ಮಸಖಿಯಂತಹ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಪರ್ಣಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರು ತ್ರಯಾ ಮತ್ತು ಕೃತಿಕಾ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net