More

    ಗಂಡನ ಕುಡಿತದ ಚಟಕ್ಕೆ ಬೇಸತ್ತು ಸಾವಿನ ಹಾದಿ ಹಿಡಿದ ನಟಿ ಅಪರ್ಣಾ: FIR ​​ನಿಂದ ಅಸಲಿ ಕಾರಣ ಬಯಲು

    ತಿರುವನಂತಪುರಂ: ನಟಿ ಅಪರ್ಣಾ ನಾಯರ್​ ಆತ್ಮಹತ್ಯೆ ಪ್ರಕರಣ ಮಲಯಾಳಂ ಮನರಂಜನಾ ಲೋಕವನ್ನು ಆಘಾತಕ್ಕೆ ದೂಡಿದೆ. ಕೌಟುಂಬಿಕ ಸಮಸ್ಯೆಯಿಂದ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಪೊಲೀಸರು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

    ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದು, ಗಂಡನ ಕುಡಿದ ಚಟವೇ ನಟಿಯ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಕುಟುಂಬದಲ್ಲಿದ್ದ ಅನೇಕ ಸಮಸ್ಯೆಗಳ ಜತೆಗೆ ಗಂಡನಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಹುದು ಎಂಬ ಚಿಂತೆಯು ಸಹ ಅಪರ್ಣಾರನ್ನು ತುಂಬಾ ಕಾಡಿತ್ತು. ಈ ಎಲ್ಲ ಹೇಳಿಕೆಗಳನ್ನು ಅಪರ್ಣಾ ಸಹೋದರಿ ನೀಡಿದ್ದು, ಅದರ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

    ಇದನ್ನೂ ಓದಿ: ಪ್ರಮಾಣಪತ್ರಗಳ ಮೇಲೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸಂಖ್ಯೆ ಮುದ್ರಿಸಬೇಡಿ: ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ ಯುಜಿಸಿ

    ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್​ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಗಂಡನ ಕುಡಿತದ ಚಟದಿಂದ ಮಾನಸಿಕ ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್​ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದಾರೆ.

    ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಅಪರ್ಣಾ ಎರಡು ವಾರಗಳ ಹಿಂಷ್ಟೇ ರಾಜೀನಾಮೆ ನೀಡಿದ್ದರು. ಮನೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ, ಆ.31ರಂದು ಕುಟುಂಬಸ್ಥರಿಗೆ ತಿಳಿಸಿದ ಬಳಿಕ ಅದೇ ದಿನ ರಾತ್ರಿ 7.30ರ ಸುಮಾರಿಗೆ ಅಪರ್ಣಾ ಅವರನ್ನು ಕರಮಾನ ಕಿಲ್ಲಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು.

    ಇದಾದ ಬಳಿಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದರು. ಇದೀಗ ಅಪರ್ಣಾ ಸಾವಿಗೆ ಗಂಡನ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂಬುದು ಬಯಲಾಗಿದೆ.

    ಅಪರ್ನಾ ಅವರು ಮೇಘತೀರ್ಥಂ, ಮುದ್ದುಗೌವ್, ಅಚಾಯನ್ಸ್, ಕೊಡತಿ ಸಮಕ್ಷಮ್ ಬಾಲನ್ ವಕೀಲ್ ಹಾಗೂ ಕಲ್ಕಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಚಂದನಮಜ ಮತ್ತು ಆತ್ಮಸಖಿಯಂತಹ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಪರ್ಣಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರು ತ್ರಯಾ ಮತ್ತು ಕೃತಿಕಾ. (ಏಜೆನ್ಸೀಸ್​)

    ಚಂದ್ರನ ಬಳಿಕ ಸೂರ್ಯ ಶಿಕಾರಿ: ಭಾರತದ ಚೊಚ್ಚಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ಉಡಾವಣೆ ಯಶಸ್ವಿ

    ದರ್ಶನ್ ಇರ್ತಾರೆ ಅಂತ ನಂಗೆ ಮೊದಲೇ ಗೊತ್ತಿತ್ತು: ಎಲ್ಲವೂ ಸರಿ ಹೋಗುತ್ತದೆ ಎಂದ ಕಿಚ್ಚ

    ಪ್ರಮಾಣಪತ್ರಗಳ ಮೇಲೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸಂಖ್ಯೆ ಮುದ್ರಿಸಬೇಡಿ: ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ ಯುಜಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts