More

    ಚಂದ್ರನ ಬಳಿಕ ಸೂರ್ಯ ಶಿಕಾರಿ: ಭಾರತದ ಚೊಚ್ಚಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ಉಡಾವಣೆ ಯಶಸ್ವಿ

    ನವದೆಹಲಿ: ದೇಶದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತದ ಪ್ರಪ್ರಥಮ ಸೂರ್ಯ ಯೋಜನೆ ಆದಿತ್ಯ-ಎಲ್ 1 ಇಂದು (ಸೆ.02) ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಆಯಿತು.

    ಪಿಎಸ್​ಎಲ್​ವಿ-ಸಿ57 ರಾಕೆಟ್ ಆದಿತ್ಯ-ಎಲ್​ 1 ನೌಕೆಯನ್ನು ಹೊತ್ತು ನಭಕ್ಕೆ ಜಿಗಿಯಿತು. ಪ್ರಮುಖ ಮೂರು ಹಂತಗಳನ್ನು ಯಶಸ್ವಿಯಾಗಿ ಮಗಿಸಿದ ನೌಕೆ ಅಂತಿಮವಾಗಿ ಭೂ ಕಕ್ಷೆಯನ್ನು ಯಶಸ್ವಿಯಾಗಿ ತಲುಪುವ ಮೂಲಕ ಉಡಾವಣೆ ಯಶಸ್ವಿಯಾಯಿತು.

    ಸೋಲಾರ್​ ಅಟ್ಮಾಸ್ಪಿಯರ್​ ಅಂದ್ರೆ ಕ್ರೋಮೋಸ್ಪಿಯರ್​ ಮತ್ತು ಸೂರ್ಯನ ವಾತಾವರಣದ ಹೊರಭಾಗವಾದ ಕರೊನಾವನ್ನು ಡೀಪ್​ ಆಗಿ ಸ್ಟಡಿ ಮಾಡುವುದೇ ಈ ಆದಿತ್ಯ ಎಲ್​ 1 ಮಿಷನ್​ನ ಒಂದು ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಆದಿತ್ಯ ಎಲ್​ 1ಗೆ 7 ಪೇಲೋಡ್​ ಅನ್ನು ಇನ್​ಸರ್ಟ್​ ಮಾಡಿದ್ದಾರೆ. ಅವುಗಳಲ್ಲಿ ನಾಲ್ಕು ಸೋಲಾರ್​ ಸರ್ಫೇಸ್​ ಅನ್ನು ಸ್ಟಡಿ ಮಾಡುತ್ತವೆ ಮತ್ತು ಉಳಿದ ಮೂರು ಸೋಲಾರ್​ ವಿಂಡ್ಸ್​ ಮತ್ತು ಮ್ಯಾಗ್ನೇಟಿಕ್​ ಫೀಲ್ಡ್​ ಅನ್ನು ಅಧ್ಯಯನ​ ಮಾಡುತ್ತವೆ.

    ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಜೆಟ್​ ಏರ್​ವೇಸ್ ಸಂಸ್ಥಾಪಕ ನರೇಶ್​ ಗೋಯಲ್​​ ಬಂಧನ

    ಸೂರ್ಯನ ಅಧ್ಯಯನಕ್ಕಾಗಿ ವೀಕ್ಷಣಾಲಯ ಹೊಂದಿರುವ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ ಇದಾಗಿದೆ. ನೇಸರನ ಪ್ರಭಾವಲಯವಾದ ಕೊರೊನಾವನ್ನು ವೀಕ್ಷಿಸುವಂತೆ ಆದಿತ್ಯ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸೌರ ಮಾರುತವನ್ನು ವೀಕ್ಷಿಸುವ ಇನ್-ಸಿಟು ವ್ಯವಸ್ಥೆಯೂ ಇದರಲ್ಲಿದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದ ವರೆಗೆ ಈ ನೌಕೆ ಕ್ರಮಿಸಲಿದೆ. ಬಳಿಕ ಸೂರ್ಯನ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಇದು ಭೂಮಿ-ಸೂರ್ಯನ ದೂರದ ಸುಮಾರು 1% ಆಗಿದೆ. ಆದಿತ್ಯ-L1 ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ. ಆದರೆ, ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪಿಸುವುದಿಲ್ಲ.

    ಆದಿತ್ಯ ಎಲ್1 ಗಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ಪೇಲೋಡ್​ಗಳನ್ನು ತಯಾರಿಸಿದೆ. ಒಟ್ಟು ಏಳು ಪೇಲೋಡ್​ಗಳು ಆದಿತ್ಯ ಎಲ್1 ನಲ್ಲಿದೆ. ಅದರಲ್ಲಿ ಪ್ರಮುಖವಾದ ಒಂದು ಪೇಲೋಡನ್ನು IIA ಸಂಸ್ಥೆ ತಯಾರಿಸಿದೆ. ವಿಸಿಬಲ್ ಲೈನ್ ಎಮಿಷನ್ ಕರೋನಾಗ್ರಾಫ್ (VELC) ಎಂಬ ಪೇಲೋಡನ್ನು IIA ಮಾಡಿದೆ. ಈ ಉಪರಕಣ ತಯಾರಿಸಲು 10 ವರ್ಷ ಸಮಯ ತೆಗೆದುಕೊಳ್ಳಲಾಗಿದೆ.

    ಆದಿತ್ಯ ಎಲ್1 ಪ್ರಾಜೆಕ್ಟ್ ಪ್ಲಾನ್ ಆದಾಗ ಮೊದಲು ತಯಾರಿಸಲು ಶುರು ಮಾಡಿದ್ದೇ ವಿಸಿಬಲ್ ಲೈನ್ ಎಮಿಷನ್ ಕರೋನಾಗ್ರಾಫ್ ಪೇಲೋಡ್. ಈ ಪೇಲೋಡ್​ನಲ್ಲಿರುವ ತಂತ್ರಜ್ಞಾನದಿಂದ ಸೂರ್ಯಗ್ರಹಣವನ್ನೇ ಸೃಷ್ಟಿ ಮಾಡಲಾಗತ್ತದೆ. ಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಮೇಲ್ಮೈನಿಂದ ಹೊರಬರುವ ಕಿರಣಗಳನ್ನು ಅಧ್ಯಯನ ಮಾಡಲಾಗತ್ತದೆ. ಗ್ರಹಣ ಆದಾಗ ಮಾತ್ರ ಈ ರೀತಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿತ್ತು. ಆದರೆ IIA ಅಭಿವೃದ್ಧಿಪಡಿಸಿರುವ ಉಪಕರಣದಿಂದ 24 ಗಂಟೆ ಕೂಡ ಸೂರ್ಯಗ್ರಹಣ ಇರಲಿದೆ. ಈ ಮೂಲಕ ಅಧ್ಯಯನ ಮಾಡುವುದು ಸುಲಭವಾಗಲಿದೆ. ಅಲ್ಲದೇ ವಿಸಿಬಲ್ ಲೈನ್ ಎಮಿಷನ್ ಕರೋನಾಗ್ರಾಫ್ ಪೇ ಲೋಡ್ ಸೂರ್ಯನಿಂದ ಹೊರಸೂಸುವ ಸೌರ ಜ್ವಾಲೆ, ಸೌರ ಕಣಗಳನ್ನು ಸೆಳೆದುಕೊಂಡು ಅಧ್ಯಯನ ನಡೆಸಲಿದೆ.

    ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸಿತು ನಾಸಾದ ಪಾರ್ಕರ್​ ಸೋಲಾರ್​ ಪ್ರೋಬ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts