ಯುವಿ ಕ್ರಿಯೇಷನ್ಸ್ ಜತೆ ನಟಿ ಅನುಷ್ಕಾ ಶೆಟ್ಟಿ ಹ್ಯಾಟ್ರಿಕ್

Anushka
Published on

ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಸದ್ಯ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿತ್ತು. ಮುಂದಿನ ಸಿನಿಮಾ ಯಾವುದು? ಅದೂ ನಾಯಕಿ ಪ್ರಧಾನವಾಗಿರಲಿದೆಯೇ? ಹೀಗೆ ಹಲವು ವಿಚಾರಗಳು ಟಾಲಿವುಡ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದ್ದವು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ, ಅನುಷ್ಕಾ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ವಿುಸುತ್ತಿದ್ದು, ಈ ಸಂಸ್ಥೆ ಜತೆಗೆ ಈ ಹಿಂದೆ ‘ಮಿರ್ಚಿ’, ‘ಭಾಗಮತಿ’ ಚಿತ್ರದಲ್ಲಿ ಅನುಷ್ಕಾ ನಟಿಸಿದ್ದರು. ಇದೀಗ ಮೂರನೇ ಬಾರಿ ಕೈ ಜೋಡಿಸಿದ್ದಾರೆ. ನವ ನಿರ್ದೇಶಕ ಮಹೇಶ್ ಬಾಬು ಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರವೂ ನಾಯಕಿ ಪ್ರಧಾನ ಸಿನಿಮಾ ಆಗಿರಲಿದ್ದು, ಶೀಘ್ರದಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net