ಹೌದು, ನಟ ನಾನಿ ಅವರ 'ಶ್ಯಾಮ್ ಸಿಂಘ ರಾಯ್' ಸಿನಿಮಾ ಡಿ.24 ರಂದು ಬಿಡುಗಡೆಯಾದ ಸಂದರ್ಭದಲ್ಲಿ ಜಗನ್ ಸರ್ಕಾರ ಜಾರಿಗೆ ತಂದ ಹೊಸ ಟಿಕೆಟ್ ಬೆಲೆಯ ಬಗ್ಗೆ ಮಾತಾಡಿದ್ದು, ''ಆಂಧ್ರದಲ್ಲಿ ಥಿಯೇಟರ್ಗಳಿಗಿಂತಲೂ ದಿನಸಿ ಅಂಗಡಿಗಳು ಹೆಚ್ಚು ಲಾಭ ಮಾಡುತ್ತಿವೆ. ಟಿಕೆಟ್ ದರ ಇಳಿಸಿದ ಸರ್ಕಾರ ಬುದ್ಧಿಹೀನ ಹಾಗೂ ಇದೊಂದು ತರ್ಕರಹಿತ ತೀರ್ಮಾನ. ಟಿಕೆಟ್ ದರ ಇಳಿಸಿರುವುದು ಬರೀ ಕಲಾವಿದರಿಗೆ, ಚಿತ್ರಮಂದಿರದವರಿಗೆ, ಸಿನಿಮಾ ಕೆಲಸಗಾರರಿಗೆ ಮಾತ್ರವಲ್ಲದೇ, ಸಿನಿ ಪ್ರೇಕ್ಷಕರಿಗೂ ಅಪಮಾನ'' ಎಂದು ಆಕ್ರೋಶ ವ್ಯಕ್ತಪಡಿಸಿದರು.