

ಸಾಮಾನ್ಯವಾಗಿ ಫ್ಯಾಷನ್ ಶೋಗಳಲ್ಲಿ ಭಾಗವಹಿಸುವ ನಟಿ ಅಥವಾ ರೂಪದರ್ಶಿಗಳು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಸಹಜ. ಆದರೆ, ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಪ್ಯಾರಿಸ್ನಲ್ಲಿ ನಡೆದ ಫ್ಯಾಷನ್ ಶೋದಲ್ಲಿ ಭಾಗವಹಿಸಿದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಟ್ರೋಲ್ ಆಗಿದ್ದಾರೆ.
ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ನಟಿ ಐಶ್ವರ್ಯಾ ಸೌಂದರ್ಯಕ್ಕೆ ಇಂದಿಗೂ ಹಲವಾರು ಅಭಿಮಾನಿಗಳಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಆದರೆ, ಫ್ಯಾಷನ್ ಶೋ ಫೋಟೋದಲ್ಲಿ ಐಶ್ವರ್ಯಾ ವಿಚಿತ್ರವಾಗಿ ಕಾಣಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಜಾಲತಾಣದಲ್ಲಿ ಅನೇಕರು, ‘ಐಶ್ವರ್ಯಾ ಮುಖ ಎಂದಿನಂತೆ ಸಹಜವಾಗಿ ಕಾಣಿಸುತ್ತಿಲ್ಲ, ಮುಖದಲ್ಲಿ ಅತಿಯಾದ ಮೇಕಪ್ ಹಾಗೂ ಇಂಜೆಕ್ಷನ್ ನೀಡಿ ಕೃತಕವಾಗಿ ಕಾಣಿಸುವಂತೆ ಮಾಡಿರಬಹುದು, ಇಂತಹ ಮೇಕಪ್ ಬಳಸುವ ಅಗತ್ಯವಿಲ್ಲ, ಡ್ರೆಸ್ ಹಾಗೂ ಕೇಶವಿನ್ಯಾಸ ಕೂಡ ಒಪ್ಪುತ್ತಿಲ್ಲ’ ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.-ಏಜೆನ್ಸೀಸ್