

| ರಾಗಿಣಿ ದ್ವಿವೇದಿ
| ನಿಶ್ವಿಕಾ ನಾಯ್ಡು
ವ್ಯಾಯಾಮ ಅಂದರೆ ಎಲ್ಲರೂ ಜಿಮ್ ಅಂತನೇ ಅಂದುಕೊಂಡಿದ್ದೇವೆ. ಹಾಗೆಯೇ ಯೋಗ ಅಂದರೆ ಹಳೆ ಕಾಲದ್ದು ಅಂತ ನನಗೂ ಆರಂಭದಲ್ಲಿ ಆಸಕ್ತಿ ಇರಲಿಲ್ಲ. ಅದೇ ಸಮಯದಲ್ಲಿ ನನ್ನ ತಂದೆಗೆ ಡಯಾಬಿಟೀಸ್ ಇತ್ತು. ಆಗ ವೈದ್ಯರು ಯೋಗ ಮಾಡಿದರೆ ಶುಗರ್ ಲೆವೆಲ್ ಕಡಿಮೆಯಾಗುತ್ತೆ ಅಂತ ಸಲಹೆ ನೀಡಿದರು. ಅಪ್ಪನ ಜತೆಗೆ ನಾನೂ ಯೋಗ ಕ್ಲಾಸ್ಗೆ ಸೇರಿಕೊಂಡೆ. ಕ್ರಮೇಣ, ಯೋಗದಿಂದ ನನ್ನಲ್ಲಿ ಉತ್ತಮ ಬದಲಾವಣೆ ಆಗುತ್ತಿದೆ ಅಂತ ಅನ್ನಿಸಿತು. ನನ್ನ ಯೋಗ ಗುರುಗಳು ವಿರೂಪಾಕ್ಷ ಬೆಳವಾಡಿಯವರು 3 ರೀತಿಯ ಸೂರ್ಯನಮಸ್ಕಾರ, 2 ರೀತಿಯ ಚಂದ್ರನಮಸ್ಕಾರ, ಹನುಮ ನಮಸ್ಕಾರ ಅಂತ ಪ್ರತಿದಿನ ಬೇರೆಬೇರೆ ರೀತಿ ಯೋಗ ಹೇಳಿಕೊಡುತ್ತಿದ್ದರು. ಕಡ್ಡಿ, ಚೇರ್, ಏರಿಯಲ್ ಯೋಗ ಅಂತ ಮತ್ತಷ್ಟು ಆಸಕ್ತಿ ಹೆಚ್ಚಿತು. ಈಗ ಯೋಗ ನನ್ನ ಜೀವನಶೈಲಿಯಾಗಿದೆ. ತಿಂಡಿ, ಊಟ, ನಿದ್ರೆ ಎಷ್ಟು ಮುಖ್ಯವೋ ಯೋಗ ಕೂಡ ನನಗೆ ಅಷ್ಟೇ ಮುಖ್ಯ. ದೇಹದಲ್ಲಿ ಆಮ್ಲಜನಕ ಹೆಚ್ಚಿಸುತ್ತದೆ, ಜೀರ್ಣಕ್ರಿಯೆ ಉತ್ತಮವಾಗಿಸುತ್ತದೆ, ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ವಿಶ್ವ ಯೋಗ ದಿನ ಅಂತ ಒಂದು ದಿನಕ್ಕೆ ಮಾತ್ರ ಯೋಗ ಮಾಡದೇ, ಪ್ರತಿದಿನ ಮಾಡಬೇಕು.
| ವೈಷ್ಣವಿ ಗೌಡ