ನಾಲ್ಕು ವರ್ಷದಿಂದ ಕೋಮಾದಲ್ಲಿದ್ದಾರೆ ಈ ಸ್ಟಾರ್​ ನಟನ ಪತ್ನಿ! ಟ್ಯೂಬ್​ ಮೂಲಕವೇ ಆಹಾರ | Actor Wife in Coma

Actor Wife in Coma
Published on

Actor Wife in Coma : ಬಾಹುಬಲಿ ಸಿನಿಮಾ ಬರುವವರೆಗೂ ನಟ ಸತ್ಯರಾಜ್​ ಅವರು ತಮಿಳಿಗರಿಗೆ ಬಿಟ್ಟು ಬೇರೆ ಯಾರಿಗೂ ಪರಿಚಯವಿರಲಿಲ್ಲ. ಯಾವಾಗ ಬಾಹುಬಲಿ ಭಾಗ ಒಂದು ಮತ್ತು ಎರಡರಲ್ಲಿ ಕಟ್ಟಪ್ಪ ಪಾತ್ರದಲ್ಲಿ ಮಿಂಚಿದರೋ ಅಂದಿನಿಂದ ಪ್ಯಾನ್​ ಇಂಡಿಯಾ ನಟನಾಗಿದ್ದಾರೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸಂಗತಿ ಏನೆಂದರೆ, ಸತ್ಯರಾಜ್​ ಕುರಿತಾದ ನೋವಿನ ಸಂಗತಿಯೊಂದು ಬಹಿರಂಗವಾಗಿದೆ. ಅದೇನೆಂದರೆ, ಅವರ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷದಿಂದ ಕೋಮಾದಲ್ಲಿದ್ದಾರೆ. ಈ ವಿಚಾರವನ್ನು ಸತ್ಯರಾಜ್​ ಪುತ್ರಿ ಹಾಗೂ ಪೌಷ್ಟಿಕತಜ್ಞೆಯಾಗಿರುವ ದಿವ್ಯಾ ಸತ್ಯರಾಜ್​ ಅವರು ಸ್ವತಃ ತಿಳಿಸಿದ್ದಾರೆ.

Actor Wife in Coma 1

ಮಹೇಶ್ವರಿ ಅವರಿಗೆ ಎಲ್ಲ ಆಹಾರವನ್ನು ಪಿಜಿ ಟ್ಯೂಬ್ ಮೂಲಕ ನೀಡಲಾಗುತ್ತಿದೆ. ನನ್ನ ತಂದೆ ಕಳೆದ 4 ವರ್ಷಗಳಿಂದ ಸಿಂಗಲ್ ಪೇರೆಂಟ್ ಆಗಿದ್ದು, ನಾನು ಅವರಿಗೆ ಒಳ್ಳೆಯ ತಾಯಿಯಾಗಿದ್ದೇನೆ ಎಂದು ದಿವ್ಯಾ ಸತ್ಯರಾಜ್ ಭಾವುಕರಾಗಿ ಹಂಚಿಕೊಂಡಿದ್ದಾರೆ. ಈ ಒಂದು ಸುದ್ದಿ ಸತ್ಯರಾಜ್​ ಅಭಿಮಾನಿಗಳಲ್ಲಿ ಭಾರಿ ನೋವುಂಟು ಮಾಡಿದ್ದು, ಆದಷ್ಟು ಬೇಗ ಮಹೇಶ್ವರಿ ಅವರು ಕೋಮಾದಿಂದ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

ಅಂದಹಾಗೆ ಸತ್ಯರಾಜ್​ ಅವರು 80ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಖಡಕ್​ ಖಳನಾಯಕನಾಗಿ ನಟಿಸಿದರು. ಸುಮಾರು 40 ವರ್ಷಗಳ ಸುದೀರ್ಘ ಸಿನಿ ಪಯಾಣ ಮಾಡಿದ್ದು, ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

Actor Wife Coma 2

ಆರಂಭದಲ್ಲಿ ಖಳನಾಯಕನಾಗಿ ಎಂಟ್ರಿ ಕೊಟ್ಟ ಸತ್ಯರಾಜ್​, ನಂತರದಲ್ಲಿ ನಾಯಕನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದರು ಮತ್ತು ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಇಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾದಲ್ಲಿಯೂ ಸತ್ಯರಾಜ್​ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net