

ಹೈದರಾಬಾದ್: ಟಾಲಿವುಡ್ನಲ್ಲಿ ನಟ ವಿಜಯ್ ದೇವರಕೊಂಡ ಸ್ಟಾರ್ ನಟ. ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸ್ಟಾರ್ಗಿರಿ ಅಲಂಕರಿಸಿ, ಸದ್ಯ ಬಹುಬೇಡಿಕೆಯುಳ್ಳ ನಟನಾಗಿ ಬೆಳೆದಿದ್ದಾರೆ. ಆದರೆ, ಇದೀಗ ಇದೇ ನಟನ ಹೆಸರಿನಲ್ಲಿ ಒಂದಷ್ಟು ವಂಚನೆಗಳಾಗುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಾಹುಲ್ ಒಳ್ಳೆಯ ಸ್ನೇಹಿತ ಅಂದ್ರು ನಿರ್ಮಾಪಕ ಕೆ.ಮಂಜು
ಅಂದರೆ, ಟಾಲಿವುಡ್ನಲ್ಲಿ ಕೆಲ ಚಿತ್ರ ನಿರ್ಮಾಣ ಸಂಸ್ಥೆಗಳು, ‘ನಮ್ಮ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಲಿದ್ದಾರೆ. ಆಸಕ್ತಿಯುಳ್ಳ ನಟ, ನಟಿಯರು ಆಡಿಷನ್ಗೆ ಬರಬಹುದು. ವಿಜಯ್ ಜತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಳ್ಳಬಹುದು ’ ಎಂದು ಹೇಳಿಕೊಳ್ಳುತ್ತಿವೆ. ಈ ವಿಚಾರ ವಿಜಯ್ ದೇವರಕೊಂಡ ಗಮನಕ್ಕೆ ಬಂದಿದ್ದು, ಅಂಥ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
‘ಕೆಲ ನಿರ್ಮಾಪಕರು ವಿಜಯ್ ದೇವರಕೊಂಡ ಹೆಸರಲ್ಲಿ ನವ ನಟ, ನಟಿಯರಿಗೆ ವಂಚಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಜಾಹೀರಾತು ನೀಡುತ್ತಿವೆ. ಅಂಥ ಸಂಸ್ಥೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದ್ದೇವೆ. ಒಂದು ವೇಳೆ ಸಿನಿಮಾ ಮಾಡುವುದೇ ನಿಜವಾದರೆ, ಆ ವಿಚಾರವನ್ನು ಸ್ವತಃ ವಿಜಯ್ ಅವರೇ ಘೋಷಣೆ ಮಾಡಲಿದ್ದಾರೆ’ ಎಂದು ವಿಜಯ್ ಅವರ ಸೋಷಿಯಲ್ ಮೀಡಿಯಾ ಟೀಮ್ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ನ್ಯಾಯ ಸಿಗುವ ನಿರೀಕ್ಷೆ ಎಂದ ಕಂಗನಾ
ಸದ್ಯ ಪುರಿ ಜಗನ್ನಾಥ್ ಜತೆಗೆ ಫೈಟರ್ ಚಿತ್ರದಲ್ಲಿ ವಿಜಯ್ ಬಿಜಿಯಾಗಿದ್ದು, ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದೆ. ಇನ್ನುಳಿದಂತೆ ವಿ ಚಿತ್ರ ನಿರ್ಮಾಣ ಮಾಡಿದ್ದ ಮೋಹನ್ ಕೃಷ್ಣ ಅವರ ಸಿನಿಮಾದಲ್ಲಿಯೂ ವಿಜಯ್ ನಟಿಸಲಿದ್ದಾರೆ. (ಏಜೆನ್ಸೀಸ್)