More

    ನ್ಯಾಯ ಸಿಗುವ ನಿರೀಕ್ಷೆ ಎಂದ ಕಂಗನಾ

    ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ವಿಚಾರವಾಗಿ ಮತ್ತು ಮುಂಬೈನಲ್ಲಿರುವ ತಮ್ಮ ಕಚೇರಿಯ ಕೆಲ ಭಾಗ ಧ್ವಂಸಗೊಳಿಸಿದ್ದರ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ತೀವ್ರ ಜಟಾಪಟಿ ನಡೆಸುತ್ತಿರುವ ನಟಿ ಕಂಗನಾ ರಣಾವತ್ ಭಾನುವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ‘ಮಹಾರಾಷ್ಟ್ರ ಸರ್ಕಾರದಿಂದ ನಾನು ಅನುಭವಿಸಿದ ಅನ್ಯಾಯದ ಬಗ್ಗೆ ರಾಜ್ಯಪಾಲರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಯುವತಿಯರು ಸೇರಿ ಎಲ್ಲ ನಾಗರಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ನನಗೆ ನ್ಯಾಯ ದೊರಕುತ್ತದೆ ಎಂದು ಭಾವಿಸುತ್ತೇನೆ. ರಾಜ್ಯಪಾಲರು ನನ್ನನ್ನು ಸ್ವಂತ ಮಗಳಂತೆ ಭಾವಿಸಿ ಮಾತುಗಳನ್ನು ಕೇಳಿದರು’ ಎಂದು ಕಂಗನಾ ಹೇಳಿದ್ದಾರೆ. ಮುಂಬೈನ ಪಾಲಿಹಿಲ್​ನಲ್ಲಿರುವ ಕಂಗನಾರ ಮಣಿಕರ್ಣಿಕ ಚಿತ್ರದ ಪೊ›ಡಕ್ಷನ್ ಹೌಸ್ ಅನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಧ್ವಂಸಗೊಳಿಸಿದ ಕ್ರಮದ ಬಗ್ಗೆ ರಾಜ್ಯಪಾಲ ಕೋಶ್ಯಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ಸಿಎಂ ಉದ್ಧವ್ ಠಾಕ್ರೆಯವರ ಸಲಹೆಗಾರರನ್ನು ಕರೆಸಿಕೊಂಡು ಬಿಎಂಸಿ ಕ್ರಮದ ಬಗ್ಗೆ ಚರ್ಚಿಸಿದ್ದರು. ಇದನ್ನೂ ಓದಿ: ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳಿದ ಮೂವರು ಕ್ರಿಕೆಟಿಗರು

    ಬಿಜೆಪಿ ಬೆಂಬಲ ದುರದೃಷ್ಟಕರ

    ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದವರಿಗೆ ಬಿಜೆಪಿ ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಇದೇ ವೇಳೆ ಕಂಗನಾ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ತಮ್ಮ ಮೌನವನ್ನು ಅಸಹಾಯಕತೆ ಎಂದು ಭಾವಿಸಬೇಡಿ. ರಾಜಕೀಯ ಬಿರುಗಾಳಿಗಳು ಬರುತ್ತಲೇ ಇರುತ್ತವೆ ಹಾಗೂ ತಾವು ಅದನ್ನು ಎದುರಿಸುತ್ತಲೇ ಇರುತ್ತೇವೆ ಎಂದಿದ್ದಾರೆ.

    ಸಂಜನಾ ಅರೆಸ್ಟ್ ಆಗುವ ಮುನ್ನ ಕಾಲ್​ ಮಾಡಿದ್ದು ಈ ವ್ಯಕ್ತಿಗೆ…; ಮತ್ತಷ್ಟು ಅನುಮಾನ ಹುಟ್ಟಿಸಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts