ಕೆಲಸದ ವಿಷಯದಲ್ಲಿ ಪತ್ನಿ ದೀಪಿಕಾಳನ್ನೇ ಹಿಂಬಾಲಿಸಿದ ರಣವೀರ್​ ಸಿಂಗ್​!

deepika-padukone-ranveer-singh-main
Published on

ಮುಂಬೈ: ಕಳೆದ ಆರು ತಿಂಗಳಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆದ ಸಿನಿಮಾ ಮಂದಿ, ಇದೀಗ ಶೂಟಿಂಗ್​ ಸಲುವಾಗಿ ಒಬ್ಬೊಬ್ಬರೇ ಹೊರ ಬರುತ್ತಿದ್ದಾರೆ. ಸ್ಟಾರ್ ಕಲಾವಿದರು ಈಗಾಗಲೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಸಹ ಗೋವಾದತ್ತ ಮುಖ ಮಾಡಿದ್ದಾರೆ. ಇದೀಗ ರಣವೀರ್​ ಸಿಂಗ್​ ಸರದಿ.

ಹಾಗಂತ ಅವರು ಹೊರಗಡೆಯ ಲೊಕೇಷನ್​ಗಳಿಗೆ ತೆರಳಿ ಚಿತ್ರೀಕರಣ ಮಾಡುತ್ತಿಲ್ಲ. ಬದಲಿಗೆ ಕೋವಿಡ್​ 19 ನಿಂದಾಗಿ ಸ್ಥಗಿತಗೊಂಡಿದ್ದ ಸ್ಟುಡಿಯೋಗಳಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ರಣವೀರ್ ಅವರ ಈ ನಿರ್ಧಾರ ಸ್ಟುಡಿಯೋ ಮಾಲೀಕರಿಗೆ ಧೈರ್ಯ ಬಂದಂತಾಗಿದೆ. ಈ ಮೂಲಕವಾದರೂ, ಸಿನಿಮಾ ಮಂದಿ ಮತ್ತೆ ಸ್ಟುಡಿಯೋಗಳತ್ತ ಮುಖ ಮಾಡಲಿ ಎಂದು ಚಿತ್ರ ನಿರ್ಮಾಪಕರೂ ಕೇಳಿಕೊಂಡಿದ್ದಾರೆ.

ಚಿತ್ರಮಂದಿರ ಸ್ಥಗಿತಗೊಂಡಿದ್ದರಿಂದ ವ್ಯವಹಾರ ನಿಂತಿದೆ. ಅದರಲ್ಲೂ ಔಟ್​ಡೋರ್​ ಚಿತ್ರೀಕರಣಕ್ಕೆ ಹೆಚ್ಚಿನ ವೆಚ್ಚ ತಗುಲಲಿದೆ. ಇದು ನಿರ್ಮಾಪಕರಿಗೆ ಹೊರೆಯಾಗುತ್ತಿರುವುದರಿಂದ, ಆ ಭಾರವನ್ನು ಇಳಿಸುವ ರಣವೀರ್​ ಈ ಸಾಹಸಕ್ಕೆ ಮುಂದಾಗಿದ್ದಾರೆ.

ಹಾಗಂತ ಇದು ಸಿನಿಮಾ ಶೂಟಿಂಗ್​ ಅಲ್ಲ. ಬದಲಿಗೆ ಜಾಹೀರಾತು ಚಿತ್ರೀಕರಣ. ದೀಪಿಕಾ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮೂರೇ ದಿನದಲ್ಲಿ 10ಕ್ಕೂ ಅಧಿಕ ಜಾಹೀರಾತುಗಳಲ್ಲಿ ಪಾಲ್ಗೊಂಡಿದ್ದರು. ಇದೀಗ ರಣವೀರ್​ ಸಹ ಮುಂಬೈನ ಸಬರ್ಬನ್​ ಸೆಟ್​ನಲ್ಲಿ ಜಾಹೀರಾತು ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗಾಗಲೇ 83 ಚಿತ್ರದ ಕೆಲಸಗಳು ಮುಕ್ತಾಯವಾಗಿದ್ದು, ಜಯೇಶ್​ಭಾಯ್​ ಜೋರ್​ಧಾರ್​, ತಕ್ತ್​ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net