

ಬೆಂಗಳೂರು: ಕರೊನಾಗೆ ತುತ್ತಾಗಿ ಜಿಮ್ನಿಂದ ದೂರವಾಗಿದ್ದ ಸುದೀಪ್, ಇದೀಗ ಮತ್ತೊಮ್ಮೆ ವರ್ಕೌಟ್ ಶುರು ಮಾಡಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವೊಂದನ್ನು ಅವರು ಟ್ವಿಟರ್ನಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತಮ್ಮ ಬೈಸೆಪ್ಸ್ ಪ್ರದರ್ಶಿಸಿರುವ ಅವರು, ‘ಕರೊನಾದಿಂದ ಚೇತರಿಸಿಕೊಂಡರೂ, ಕೆಲವು ತಿಂಗಳುಗಳ ಕಾಲ ಅದರ ಪರಿಣಾಮ ಇದ್ದೇ ಇರುತ್ತದೆ ಎಂದಿದ್ದಾರೆ.
ಅಲ್ಲದೆ ವರ್ಕೌಟ್ ಮಾಡುವುದು ನನ್ನ ಇಷ್ಟದ ಹವ್ಯಾಸವಾಗಿದ್ದು, ಇದೀಗ ಪುನಃ ಪ್ರಾರಂಭಿಸಿದ್ದೇನೆ. ನನ್ನ ಹಳೆಯ ದಿನಚರಿಯನ್ನು ಮತ್ತೆ ಪ್ರಾರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅಗತ್ಯವಿದ್ದ ಸಮಯದಲ್ಲಿ ನನಗೆ ಸಹಾಯ ಮಾಡಿದ ವೈದ್ಯರು, ತರಬೇತುದಾರರು, ಕುಟುಂಬದವರು ಮತ್ತು ಸ್ನೇಹಿತರಿಗೆ ಧನ್ಯವಾದಗಳು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.