ಹೊಸ ವರ್ಷದ ಹಿಂದಿನ ದಿನವೇ 'ಪ್ರೊಡಕ್ಷನ್​ ನಂ. 2' ಘೋಷಿಸಿದ ರಿಷಬ್ ಶೆಟ್ಟಿ; ನೆಕ್ಸ್ಟ್​ ಇಂಟ್ರೊಡಕ್ಷನ್​ ನಾಯಕನಾ-ನಾಯಕಿಯಾ?!

Rishab Shetty
Published on

ಬೆಂಗಳೂರು: ನಟ-ನಿರ್ದೇಶಕ-ನಿರ್ಮಾಪಕ ರಿಷಬ್ ಶೆಟ್ಟಿಗೆ ಈ ವರ್ಷ ಹೊಸ ವರ್ಷದ ಖುಷಿ ಜತೆಗೆ ಮತ್ತೆರಡು ಖುಷಿ ಸೇರಿಕೊಂಡಿವೆ. ಮಾತ್ರವಲ್ಲ, ಹ್ಯಾಪಿ ನ್ಯೂ ಇಯರ್ ಜತೆಗೇ ಅವರು ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದರಲ್ಲೂ ಹೊಸ ವರ್ಷದ ಹಿಂದಿನ ದಿನವೇ ಅವರು ತಮ್ಮ ಮುಂದಿನ ಪ್ರೊಡಕ್ಷನ್​ ಕುರಿತು ಘೋಷಣೆ ಮಾಡಿಕೊಂಡಿದ್ದಾರೆ.

ರಿಷಬ್ ನಿರ್ದೇಶದನ 'ಕಿರಿಕ್ ಪಾರ್ಟಿ' ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಮಾತ್ರವಲ್ಲ, ಈ ಚಿತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಇದರಲ್ಲಿ ನಟಿಸಿದ್ದವರಿಗೂ, ಇದರ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದವರ ಜೀವನದ ಗತಿಯನ್ನೂ ಬದಲಿಸಿದೆ. ಅಂಥ 'ಕಿರಿಕ್​ ಪಾರ್ಟಿ' ಸಿನಿಮಾ ತೆರೆಕಂಡು ನಿನ್ನೆಗೆ ಐದು ವರ್ಷ ಪೂರ್ಣಗೊಂಡಿದೆ. ನಾಳೆ ಎಂದರೆ ಹೊಸ ಕ್ಯಾಲೆಂಡರ್ ವರ್ಷ. ಇದರ ನಡುವೆಯೇ ರಿಷಬ್ ಮತ್ತೊಂದು ಖುಷಿ ಹಂಚಿಕೊಂಡಿದ್ದಾರೆ.

ಅದೇನೆಂದರೆ ಅವರ ಹೋಮ್​ ಪ್ರೊಡಕ್ಷನ್​ನ ಇನ್ನೊಂದು 'ಪ್ರೊಡಕ್ಷನ್'​. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅರ್ಥಾತ್, ತಮ್ಮ ಸಂಸಾರ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದನ್ನು ಅವರು ಸಿನಿಮಿಶ್ರಿತ ಶೈಲಿಯಲ್ಲೇ ಹೇಳಿಕೊಂಡಿದ್ದಾರೆ. "ಹೊಸ ವರ್ಷಕ್ಕೆ ಹೊಸ 'ಸಂತಸ'ವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ, ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ.. ಪ್ರೊಡಕ್ಷನ್​ ನಂ. 2" ಎಂದು ಅವರು ಸಂತೋಷ ಹಂಚಿಕೊಂಡಿದ್ದಾರೆ. ಅದರಲ್ಲೂ ರಣ್ವಿತ್ ಅಣ್ಣನಾಗಲಿದ್ದಾನೆ ಎನ್ನುವ ಮೂಲಕ ತಮ್ಮ ಮುಂದಿನ ಪ್ರೊಡಕ್ಷನ್​ನಲ್ಲಿ ಇಂಟ್ರೊಡ್ಯೂಸ್ ಆಗಲಿರುವುದು ಹೀರೋನೋ ಹೀರೋಯಿನ್ನೋ ಎಂಬುದನ್ನು ಬುದ್ಧಿವಂತಿಕೆಯಿಂದಲೇ ಹೇಳಿ ಅವರು ಕುತೂಹಲವನ್ನು ಕಾಯ್ದಿರಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net