'ಆ ದಿನಗಳು' ಖ್ಯಾತಿಯ ನಟ ಚೇತನ್ ಮಿಸ್ಸಿಂಗ್?; ಪೊಲೀಸ್​ ಠಾಣೆಗೆ ಧಾವಿಸಿದ ಪತ್ನಿ, ಅಪಹರಣ ಆರೋಪ..

Chetan
Published on

ಬೆಂಗಳೂರು: ಕನ್ನಡ ಚಿತ್ರರಂಗದ ಆ ದಿನಗಳು ಖ್ಯಾತಿಯ ನಟ ಚೇತನ್ ಮಿಸ್ಸಿಂಗ್ ಆಗಿದ್ದಾರೆ ಎನ್ನಲಾಗಿದ್ದು, ಅವರ ಪತ್ನಿ ಮೇಘ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ. ನಟ ಚೇತನ್​ ಕುಮಾರ್ ಅವರ ಪೇಜ್​ನಿಂದ ಲೈವ್ ಬಂದು ಅವರು ಈ ವಿಷಯ ಹೇಳಿಕೊಂಡಿದ್ದಾರೆ.

ಮನೆಯಲ್ಲಿ ಇಂದು ಒಂದು ಗಂಟೆ ಹುಡುಕಾಡಿದರೂ ಪತಿ ಚೇತನ್ ಕಾಣಿಸಿರಲಿಲ್ಲ. ಬಳಿಕ ಕೆಲಸದವರು ಅವರನ್ನು ಪೊಲೀಸರು ಕರೆದೊಯ್ದರು ಎಂದು ಹೇಳಿದ್ದು, ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆಗೆ ಬಂದು ಕೇಳಿದರೆ ಅವರು ತಮ್ಮ ಬಳಿ ಇಲ್ಲ ಎನ್ನುತ್ತಿದ್ದಾರೆ.

ಚೇತನ್ ಅವರು ಮಿಸ್ಸಿಂಗ್ ಆಗಿದ್ದು, ಇದೊಂಥರ ಅಪಹರಣ ಪ್ರಕರಣ. ಪೊಲೀಸರು ಅವರು ವಿಚಾರಣೆಗೆ ಕರೆದೊಯ್ಯುವುದಿದ್ದರೂ ನೋಟಿಸ್ ಕೊಡಬೇಕು, ಕಡೇಪಕ್ಷ ಮನೆಯವರಿಗೆ ಮಾಹಿತಿ ನೀಡಬೇಕು. ಆದರೆ ಯಾವ ಮಾಹಿತಿಯನ್ನೂ ನೀಡದೆ ಪೊಲೀಸರು ಅವರನ್ನು ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಕೇಳಿದರೆ ನಮಗೆ ಏನೂ ಗೊತ್ತಿಲ್ಲ ಎನುತ್ತಿದ್ದಾರೆ. ಚೇತನ್ ಫೋನ್​ ಹಾಗೂ ಗನ್​ಮ್ಯಾನ್ ಕೂಡ ಸ್ವಿಚ್ಡ್​ ಆಫ್​ ಆಗಿದೆ ಎಂದು ಹೇಳಿರುವ ಪತ್ನಿ, ಶೇಷಾದ್ರಿಪುರ ಪೊಲೀಸ್ ಠಾಣೆ ಬಳಿ ಬಂದು ಲೈವ್ ಮಾಡಿ ಪೊಲೀಸರ ನಡೆ ವಿರುದ್ಧ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net