ರೋಗ ನಿರೋಧಕ ಶಕ್ತಿ ವಿಚಾರಕ್ಕೆ ಅಜಯ್​ ದೇವಗನ್​ ಟ್ರೋಲ್​

Ajay
Published on

ಟ್ರೋಲ್​ ವಿಚಾರದಲ್ಲಿ ಯಾವೆಲ್ಲ ಸೆಲೆಬ್ರಿಟಿಗಳು ಯಾವೆಲ್ಲ ಕಾರಣಕ್ಕೆ ಟ್ರೋಲ್​ ಆಗುತ್ತಾರೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಆ ಕ್ಷಣಕ್ಕೆ ಏನೆಲ್ಲ ಪ್ರಸ್ತುತ ವಿಷಯಗಳು ಪ್ರಚಲಿತದಲ್ಲಿರುತ್ತವೋ ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಟ್ರೋಲಿಗರು ಸೆಲೆಬ್ರಿಟಿಗಳ ಕಾಲೆಳೆಯುತ್ತಾರೆ. ಇತ್ತೀಚೆಗಷ್ಟೇ ಹಿಂದಿ ಬಿಗ್​ಬಾಸ್​ನ ಬೆನೆಫ್ಶಾರನ್ನು ಬಾರಿ ಟ್ರೋಲ್​ ಮಾಡಿದ್ದರು ನೆಟ್ಟಿಗರು. ನೀನಿನ್ನೂ ಯಾಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಕಾಡಿಸಿದ್ದರು. ಅದಕ್ಕೆ ಅವರಿಂದಲೂ ಖಡಕ್​ ಪ್ರತಿಕ್ರಿಯೆ ಬಂದಿತ್ತು. ಅಷ್ಟಕ್ಕೂ ಈಗ್ಯಾಕೆ ಈ ಟ್ರೋಲ್​ ವಿಚಾರ ಅಂದ್ರಾ? ಅಜಯ್​ ದೇವಗನ್​ ಮಾಡಿರೋ ಒಂದು ಕೆಲಸ ಇದೀಗ ನೆಟ್ಟಿಗರಿಗೆ ಆಹಾರ ಒದಗಿಸಿಕೊಟ್ಟಂತಾಗಿದೆ.

ಹೌದು, ಇತ್ತೀಚೆಗಷ್ಟೇ ತಮ್ಮ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ನಲ್ಲಿ ರೋಗ ನಿರೋಧನ ಶಕ್ತಿ ವೃದ್ಧಿಸುವ ಔಷಧವೊಂದನ್ನು ಅಜಯ್​ ಪ್ರಮೋಟ್​ ಮಾಡಿದ್ದರು. ‘ಪ್ರೀತಿಯ ಮಿತ್ರರೇ, ನಾನು ಕಳೆದ ಒಂದು ತಿಂಗಳಿಂದ ಇಮ್ಯೂ 10 ಸೇವಿಸುತ್ತಿದ್ದೇನೆ. ರೋಗನಿರೋಧಕ ಶಕ್ತಿ ವೃದ್ಧಿಗೆ ನನಗಿದು ತುಂಬ ಸಹಕಾರಿಯಾಗಿದೆ. ನಿಮಗೆ ರೋಗನಿರೋಧಕ ಸಾಮರ್ಥ್ಯದ ಅವಶ್ಯಕತೆ ಇದ್ದರೆ ಇದನ್ನು ಬಳಸಿ’ ಎಂದೂ ಅಜಯ್​ ಹೇಳಿಕೊಂಡಿದ್ದರು. ಹಾಗೆ ಪೋಸ್ಟ್ ಮಾಡಿದ್ದೇ ತಡ ಸಾಕಷ್ಟು ಮಂದಿ ಈ ಫೋಟೋಕ್ಕೆ ಬಗೆಬಗೆ ರೀತಿಯಲ್ಲಿ ಕಾಲೆಳೆದಿದ್ದಾರೆ.

ವಿಮಲ್​ ಪಾನ್​ ಮಸಾಲಾ ತಿನ್ನುವುದರಿಂದಲೂ ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆಯೇ? ಎಂದು ಕಮೆಂಟ್​ ಮಾಡಿದರೆ, ಇನ್ನು ಕೆಲವರು ಇಡೀ ಭಾರತಕ್ಕೆ ಗೊತ್ತಿದೆ, ಅಜಯ್​ ದೇವಗನ್​ ರೋಗನಿರೋಧಕ ಶಕ್ತಿಯ ಹಿಂದಿನ ಗುಟ್ಟು ವಿಮಲ್​ ಎಂದು.. ಹೀಗೆ ವಿಮಲ್​ ಪಾನ್​ ಮಸಾಲಾ ಜಾಹೀರಾತನ್ನೇ ಗುರಿಯಾಗಿಸಿಕೊಂಡು, ಅಜಯ್​ ಅವರನ್ನು ಟ್ರೋಲ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net