ಅಂದಹಾಗೆ ಅರ್ಜುನ್ ಸರ್ಜಾ, ಕನ್ನಡದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.