Rajat Patidar : ಐಪಿಎಲ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹಣೆಬರಹ ಬದಲಿಸಿದ ಯಶಸ್ವಿ ನಾಯಕ ಎಂದರೆ ಅದು ರಜತ್ ಪಾಟೀದಾರ್! ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲದೆ, ತಮ್ಮ ಅದ್ಭುತ ಹಾಗೂ ಚತುರ ನಾಯಕತ್ವದಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಅವರು, 2025ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟು ಇತಿಹಾಸ ಸೃಷ್ಟಿಸಿದ್ದರು. ಅಲ್ಲದೆ, ಪ್ರಸಕ್ತ 2026ರ ಐಪಿಎಲ್ ಆವೃತ್ತಿಯಲ್ಲೂ ಜವಾಬ್ದಾರಿಯುತ ಆಟದ ಮೂಲಕ ತಂಡವನ್ನು ಸತತವಾಗಿ ಫೈನಲ್ ಹಂತಕ್ಕೆ ತಲುಪಿಸಿ ಸೈ ಎನಿಸಿಕೊಂಡಿದ್ದಾರೆ. ಮುಂಚೂಣಿಯಲ್ಲಿ ನಿಂತು ರನ್ ಮಳೆ ಹರಿಸುತ್ತಾ, ಇಡೀ ತಂಡಕ್ಕೆ ಸ್ಫೂರ್ತಿಯಾಗಿರುವ ಪಾಟೀದಾರ್, ಸದ್ಯ ಆರ್‌ಸಿಬಿ ಅಭಿಮಾನಿಗಳ ಪಾಲಿನ ರಿಯಲ್ 'ಕ್ಯಾಪ್ಟನ್ ಫೆಂಟಾಸ್ಟಿಕ್' ಆಗಿ ಹೊರಹೊಮ್ಮಿದ್ದಾರೆ!