ಈ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು ಇನ್ನಿಲ್ಲ, ಬದುಕಿದ್ದಾಗ ತೆಗೆದ ಅದ್ಭುತ ಚಿತ್ರಗಳು ಇಲ್ಲಿವೆ

netraraju
Published on

ಮೈಸೂರು: 2019ರ ದಸರಾ ವೇಳೆ ದೀಪಾಲಂಕಾರದ ನಡುವೆ ಝಗಮಗಿಸುತ್ತಿದ್ದ ಮೈಸೂರು ಅರಮನೆ ಮುಂಭಾಗ ಬಡ ತಾಯಿ-ಮಗು ನಿಂತಿದ್ದರು. ಈ ಫೋಟೋವನ್ನು ಖ್ಯಾತ ಛಾಯಾಚಿತ್ರಗ್ರಾಹಕ ಕ್ಲಿಕ್ಕಿಸಿದ್ದರು. ಈ ಫೋಟೋ ದೇಶಾದ್ಯಂತ ಜನಮನ್ನಣೆ ಪಡೆಯುವ ಮೂಲಕ ನೇತ್ರರಾಜು ಹೆಸರನ್ನೂ ಪಸರಿಸಿತ್ತು.

ಅಂತಹ ಕ್ರಿಯಾಶೀಲ ಛಾಯಾಗ್ರಾಹಕ ನೇತ್ರರಾಜು ಇನ್ನಿಲ್ಲ. ಹೃದಯಾಘಾತದಿಂದ ಜಯದೇವ ಆಸ್ಪತ್ರೆಯಲ್ಲಿ ಶುಕ್ರವಾರ ನೇತ್ರರಾಜು(62) ಕೊನೆಯುಸಿರೆಳೆದರು.

ನೇತ್ರರಾಜು
ನೇತ್ರರಾಜು

ಸೂಕ್ಷ್ಮ ಸಂವೇದನೆ, ಮಾನವಾಸಕ್ತ ಫೋಟೋ ತೆಗೆಯುವುದರಲ್ಲಿ ನಿಸ್ಸೀಮರಾಗಿದ್ದ ನೇತ್ರರಾಜು ನರಹಂತಕ ವೀರಪ್ಪನ್ ಬದುಕಿದ್ದ ಕಾಲದಲ್ಲಿ ಕಾಡು ಸುತ್ತಿ ಫೋಟೋ ದಾಖಲಿಸಿದ್ದರು. ಇವರ ಫೋಟೋಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸಿದ್ದವು.

ಮೈಸೂರಿನ ಆಂದೋಲನ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವೆಡೆ ಕೆಲಸ ಮಾಡಿದ್ದ ನೇತ್ರರಾಜು 30ಕ್ಕೂ ಹೆಚ್ಚು ವರ್ಷಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ನೇತ್ರರಾಜು ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಅಶ್ವಥ ನಾರಾಯಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಸಚಿವ ಮುರುಗೇಶ್ ನಿರಾಣಿ, ಮೈಸೂರು ಪತ್ರಕರ್ತರ ಸಂಘ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

WhatsApp Image 2021-05-22 at 10.29.06 AM

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net