More

    ಕರೊನಾ ಸೋಂಕಿನಿಂದ ಸತ್ತವನ ಮೃತದೇಹ ತಬ್ಬಿಕೊಂಡು ತುಟಿಗೆ ಮುತ್ತಿಟ್ಟ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ತೆಲಂಗಾಣ: ಕರೊನಾ ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಸೋಂಕು ತಗುಲುವ ಭೀತಿಯಲ್ಲಿ ಅಕ್ಕಪಕ್ಕದ ಮನೆಯವರೊಂದಿಗಿನ ಭೇಟಿಗೂ ಬಹುತೇಕರು ತಾತ್ಕಾಲಿಕ ಬ್ರೇಕ್​ ಹಾಕಿದ್ದಾರೆ. ಇನ್ನು ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಹೋಗುತ್ತಿಲ್ಲ. ತನ್ನದೇ ಕುಟುಂಬದ ವ್ಯಕ್ತಿ ಸತ್ತರೂ ಕೆಲವರು ಸೋಂಕು ಹರಡುವ ಭೀತಿಯಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಭೂಪ ಕರೊನಾ ಸೋಂಕಿನಿಂದ ಮೃತಪಟ್ಟ ಅಪರಿಚಿತ ವ್ಯಕ್ತಿಯ ಶವವನ್ನು ತಬ್ಬಿಕೊಂಡಿದ್ದಲ್ಲದೆ, ಮೃತದೇಹದ ತುಟಿಗೆ ಮುತ್ತಿಕ್ಕಿದ್ದಾನೆ!

    ಹೌದು, ಇಂತಹ ಘಟನೆ ಆಂಧ್ರಪ್ರದೇಶದ ಗಡಿ ಭಾಗದ ಜಿಲ್ಲೆ ಖಮ್ಮಮ್​ನಲ್ಲಿ ಭಾನುವಾರ ಸಂಭವಿಸಿದ್ದು, ವಿಡಿಯೋ ವೈರಲ್​ ಆಗಿದೆ. ಕರೊನಾ ಸೋಂಕು ತಗುಲಿದ್ದ 40 ವರ್ಷದ ವ್ಯಕ್ತಿಯೊಬ್ಬರು ಖಮ್ಮಮ್​ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಎರಡು ದಿನದ ಹಿಂದೆ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದರು. ಆಂಬುಲೆನ್ಸ್​ಗೆ ಶವ ಇಡುವ ವೇಳೆ ಅಲ್ಲಿಗೆ ಬಂದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಣ್ಣಮ್​ ಶ್ರೀನಿವಾಸ್​ ರಾವ್​ ಎಂಬಾತ ಶವಕ್ಕೆ ಮತ್ತಿಟ್ಟು ಮುಖಕ್ಕೆ ಮುಖವನ್ನಿಟ್ಟು ತಬ್ಬಾಡಿದ್ದಾರೆ. ಇದನ್ನೂ ಓದಿರಿ ಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಡೆಪಾಸಿಟ್​! ಸಂಕಷ್ಟಕ್ಕೆ ಮಿಡಿದ ಆಂಧ್ರ ಸರ್ಕಾರ

    ಅಣ್ಣಮ್​ ಶ್ರೀನಿವಾಸ್​ ರಾವ್​ರ ಈ ವರ್ತನೆ ಕಂಡು ಅಲ್ಲಿದ್ದವರು ಅರೆಕ್ಷಣ ದಂಗಾಗಿ ನಿಂತರು. ಮೃತದೇಹಗಳಿಂದ ಕರೊನಾ ವೈರಸ್ ಹರಡುವುದಿಲ್ಲ ಎಂಬ ಅರಿವು ಮೂಡಿಸಲು ಅಣ್ಣಮ್​ ಶ್ರೀನಿವಾಸ್​ ರಾವ್​ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೃತ ವಯ್ಕತಿಯ ಕುಟುಂಬಕ್ಕೂ ಸಹಾಯ ಮಾಡಿದ್ದಾರೆ. ಕರೊನಾ ಎರಡನೇ ಅಲೆಯಲ್ಲಿ ಮೃತಪಟ್ಟ ಹಲವರ ಅಂತ್ಯಸಂಸ್ಕಾರ ಕಾರ್ಯವನ್ನು ಖುದ್ದಿ ಈ ಸಾಮಾಜಿಕ ಕಾರ್ಯಕರ್ತ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಇವರ ನಡೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

    ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

    ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts