ಪ್ರಚಾರದ ವೇಳೆ ಮಹಿಳೆಗೆ ಕಿಸ್​ಕೊಟ್ಟ ಬಿಜೆಪಿ ಅಭ್ಯರ್ಥಿ..ವೀಡಿಯೋ ವೈರಲ್​!

bjp candidate
Published on

ಕೋಲ್ಕತ್ತಾ: ಸಂಸದ ಹಾಗೂ ಪಶ್ಚಿಮ ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖಗೇನ್ ಮುರ್ಮು ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಟ್ಟಿದ್ದು, ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಅವರು ಸಮರ್ಥಿಸಿಕೊಂಡಿದ್ದರೂ, ವಿವಾದಕ್ಕೆ ಸಿಲುಕಿದ್ದಾರೆ.

ಖಗೇನ್ ಮುರ್ಮು ಪ್ರಚಾರದ ಸಲುವಾಗಿ ಕ್ಷೇತ್ರದ ಚಂಚಲ್‌ನ ಶ್ರೀಹಿಪುರ ಗ್ರಾಮಕ್ಕೆ ಬಂದಿದ್ದು, ಈ ಘಟನೆ ನಡೆದಿದೆ.

ಘಟನೆಯ ಕುರಿತು ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು ಖಂಡಿಸಿದೆ. ಪಕ್ಷದ "ಮಹಿಳಾ ವಿರೋಧಿ" ನಿಲುವನ್ನು ಈ ಕೃತ್ಯ ಸೂಚಿಸುತ್ತದೆ ಎಂದು ಟಿಎಂಸಿ ಮಾಲ್ಡಾ ಜಿಲ್ಲಾ ಉಪಾಧ್ಯಕ್ಷ ದುಲಾಲ್ ಸರ್ಕಾರ್ X (ಎಕ್ಸ್​) ನಲ್ಲಿ ಪೋಸ್ಟ್​ ಹಾಕಿ ಟೀಕಿಸಿದ್ದಾರೆ.

ಬಳಿಕ ತೃಣಮೂಲ ಕಾಂಗ್ರೆಸ್ ರಾಜ್ಯ ಘಟಕ ಈ ವಿಷಯದ ಮೇಲೆ ಸ್ಪಂದಿಸಿದ್ದು, "ನೀವು ಈಗ ನೋಡಿದ್ದನ್ನು ನೀವು ನಂಬಲಾಗದಿದ್ದರೆ, ನಾವು ಸ್ಪಷ್ಟಪಡಿಸುತ್ತೇವೆ. ಹೌದು, ಇದು ಬಿಜೆಪಿ ಸಂಸದ ಮತ್ತು ಮಲ್ದಹಾ ಉತ್ತರ ಅಭ್ಯರ್ಥಿ @khagen_murmu ತನ್ನ ಸ್ವಂತ ಇಚ್ಛೆಯಿಂದ ಮಹಿಳೆಯನ್ನು ಚುಂಬಿಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುವ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕರವರೆಗೆ, ಬಿಜೆಪಿ ಪಾಳಯದಲ್ಲಿ ಮಹಿಳಾ ವಿರೋಧಿ ರಾಜಕಾರಣಿಗಳೇ ತುಂಬಿಹೋಗಿದ್ದಾರೆ. ಮೋದಿ ಕಾ ಪರಿವಾರ್ ನಾರಿ ಕಾ ಸಮ್ಮಾನ್‌ನಲ್ಲಿ ತೊಡಗಿಸಿಕೊಂಡಿರುವುದು ಹೀಗೆ? ಅವರು ಏನು ಮಾಡುತ್ತಾರೆಂದು ಊಹಿಸಿ..ಇನ್ನು ಅವರು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ" ಎಂದು ಜನರನ್ನು ಎಚ್ಚರಿಸಿದೆ.

ಖಗೇನ್ ಮುರ್ಮು ಇದನ್ನು ಸಮರ್ಥಿಸಿಕೊಂಡಿದ್ದು, ಆ ಮಹಿಳೆ "ತನ್ನ ಮಗು" ಇದ್ದಂತೆ ಎಂದು ಪ್ರತಿಪಾದಿಸಿದ್ದಾರೆ. ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ಕಟ್ಟುಕಥೆ ರೂಪಿಸಿದ್ದಾರೆ ಎಂದು ಅವರು ಟೀಕೆಗಳನ್ನು ತಳ್ಳಿಹಾಕಿದರು.

ವಿವಾದದಲ್ಲಿ ಸಿಲುಕಿರುವ ಮಹಿಳೆ ಕೂಡ ಮುರ್ಮು ಅವರನ್ನು ಬೆಂಬಲಿಸಲು ಮುಂದಾದರು, ಅವರ ಪ್ರೀತಿಯ ಭಾವವನ್ನು ತಂದೆ-ಮಗಳ ಸಂಬಂಧಕ್ಕೆ ಹೋಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net