ಅತಿಯಾದ ಕಾಮಾಸಕ್ತಿ, ಮಾದಕ ವ್ಯಸನಿ... 25 ವರ್ಷದ ಹಿಂದಿನ ನೋವಿನ ಘಟನೆ ಬಿಚ್ಚಿಟ್ಟ ಕಲಾವಿದೆ ಚೆಲುವೆ! Heera Rajagopal

Heera Rajagopal
Published on

Heera Rajagopal : ನೀವು ಕಲಾವಿದ ಸಿನಿಮಾವನ್ನು ನೀವು ನೋಡಿರಬಹುದು. ಅದರಲ್ಲಿ ಒಂದು ಬೆಚ್ಚನೆ ಗೂಡಿರಲು, ಹೇ ನವಿಲೆ ನನ್ನ ನವಿಲೆ, ಓ ತುಂಟಿಯೇ, ಇನಿಯಾ ಇನಿಯಾ ಮತ್ತು ಅಂದಗಾರ ಅಳಿಮಯ್ಯ ಹಾಡುಗಳು ಇಂದಿಗೂ ಕೇಳುಗರಿಗೆ ಮುದ ನೀಡುತ್ತದೆ. ಇನ್ನು ಯಾರೇ ನೀನು ಚೆಲುವೆ ಸಿನಿಮಾದಲ್ಲಿ ಡಯಾನಾ ಡಯಾನಾ ಹಾಡನ್ನು ಕೇಳೇ ಇರುತ್ತೀರಿ.

ಈ ಹಾಡುಗಳಲ್ಲಿ ಕನ್ನಡಿಗರ ಮನಸ್ಸನ್ನು ಕದ್ದಿದ್ದು ನಟಿ ಹೀರಾ ರಾಜ್​ಗೋಪಾಲ್​. ಕನ್ನಡದಲ್ಲಿ ಅಪೂರ್ವ ಜೋಡಿ, ಕಲಾವಿದ ಮತ್ತು ಯಾರೇ ನೀನು ಚೆಲುವೆ ಸೇರಿ ನಟಿಸಿದ್ದು ಮೂರೇ ಸಿನಿಮಾವಾದರೂ ತಮ್ಮ ಬೋಲ್ಡ್​ ನಟನೆಯಿಂದಲೇ ಹೀರಾ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಅಲ್ಲದೆ, ತಮ್ಮ ಬ್ಯೂಟಿ ಮತ್ತು ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಹಾಟ್​ ಫೇವರಿಟ್​ ಆಗಿದ್ದರು. ಅವರ ಹಾಡುಗಳಂತೂ ಇಂದಿಗೂ ಫೇಮಸ್​. ಕನ್ನಡಕ್ಕಿಂತ ತಮಿಳು, ತೆಲುಗು ಮತ್ತು ಹಿಂದಿ ಭಾಷೆ ಸಿನಿಮಾಗಳಲ್ಲಿ ಹೀರಾ ಹೆಚ್ಚು ಮಿಂಚಿದರು. 1999ರವರೆಗೂ ಸಿನಿಮಾ ರಂಗದಲ್ಲಿ ಆ್ಯಕ್ಟೀವ್​ ಆಗಿದ್ದ ಹೀರಾ ಆ ಬಳಿಕ ಸಿನಿಮಾ ಲೋಕದಿಂದ ಕಣ್ಮರೆಯಾದರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಹೀರಾ, 25 ವರ್ಷಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರವನ್ನು ಸ್ವತಃ ಹೀರಾ ಅವರೇ ಬಹಿರಂಗಪಡಿಸಿದ್ದಾರೆ. 25 ವರ್ಷಗಳ ಹಿಂದೆ ತಾನು ಪ್ರೀತಿಸುತ್ತಿದ್ದ ವ್ಯಕ್ತಿ ತನ್ನನ್ನು ನಿರ್ದಯವಾಗಿ ಕಡೆಗಣಿಸಿ, ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದೆ ಎಂದು ನಟಿ ಹೀರಾ, ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 2025ರ ಜನವರಿ ತಿಂಗಳಲ್ಲಿ ಬರೆದಿರುವ ಬ್ಲಾಗ್​ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಹೀರಾ ಅವರು ಓರ್ವ ಖ್ಯಾತ ನಟನನ್ನು ಪ್ರೀತಿ ಮಾಡಿದರು. ಆತ ಬೇರೆ ಯಾರೂ ಅಲ್ಲ, ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​. ಆದರೆ, ಹೀರಾ ತನ್ನ ಬ್ಲಾಗ್​ನಲ್ಲಿ ಎಲ್ಲೂ ಅಜಿತ್​ ಹೆಸರು ಉಲ್ಲೇಖಿಸಿಲ್ಲ. ಅಂದಹಾಗೆ, ಹೀರಾ ಜತೆಗೆ ಅಜಿತ್ ಅವರ ಲವ್​ಸ್ಟೋರಿ 1990 ರಲ್ಲಿ ಭಾರಿ ಸುದ್ದಿಯಾಗಿತ್ತು. ಬಳಿಕ ಕೆಲ ವಿವಾದಗಳಿಂದಾಗಿ 1999ರಲ್ಲಿ ಇಬ್ಬರು ಬೇರ್ಪಟ್ಟರು ಎಂಬ ವರದಿಗಳು ಬಂದವು. ಹೀಗಾಗಿ ಹೀರಾ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿರುವುದು ಅಜಿತ್​ ಬಗ್ಗೆ ಎಂಬುದು ಸ್ಪಷ್ಟವಾಗಿದೆ.

ಹೀರಾ ಹೇಳುವಂತೆ, ಬೆನ್ನುಮೂಳೆಯ ಗಾಯದಿಂದ ಸ್ಟಾರ್​ ನಟ ಹಾಸಿಗೆ ಹಿಡಿದಾಗ, ಸದಾ ಆತನೊಂದಿಗೆ ಇದ್ದು ಆರೈಕೆ ಮಾಡಿದಳಂತೆ. ಇಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದರಂತೆ. ಹೀಗಿರುವಾಗ ಒಂದು ದಿನ ಆತ ನನ್ನನ್ನು ಇದ್ದಕ್ಕಿದ್ದಂತೆ ಬಿಟ್ಟು ಹೋದನು. ಅಷ್ಟೇ ಅಲ್ಲ, ಅವನು ಹೋದ ನಂತರ, ನನ್ನ ವಿರುದ್ಧ ಅಪಪ್ರಚಾರ ನಡೆಯಿತು. ಆ ನಟನ ಅಭಿಮಾನಿಗಳು ನನ್ನನ್ನು ಮಾದಕ ವ್ಯಸನಿ ಎಂದರು. ಅದು ಸಾಲದು ಅಂತ ಅತಿಯಾದ ಲೈಂಗಿಕ ವ್ಯಸನಿ ಮತ್ತು ಮದ್ಯವ್ಯಸನಿ ಎಂಬ ಹಣೆಪಟ್ಟಿ ಕಟ್ಟಿದರು ಎಂದು ಹೀರಾ ಬೇಸರ ಹೊರಹಾಕಿದ್ದಾರೆ.

ಸ್ಟಾರ್​ ನಟನ ಅಭಿಮಾನಿಗಳು ಈ ಅಪಪ್ರಚಾರವನ್ನು ಮಾಡಿದಾಗ, ಇನ್ನು ಮುಂದೆ ಬದುಕಲು ಸಾಧ್ಯವಾಗದ ಹಂತವನ್ನು ತಲುಪಿದೆ. ಆತ್ಮಹತ್ಯೆಯ ಬಗ್ಗೆ ಯೋಚಿಸಿದೆ ಎಂದು ಹೀರಾ ಹೇಳಿದ್ದಾರೆ. ಸಾರ್ವಜನಿಕರಲ್ಲಿ ನನ್ನ ಬಗ್ಗೆ ಅಪಪ್ರಚಾರ ಹರಡುವಲ್ಲಿ ಆ ನಟನೂ ಭಾಗಿಯಾಗಿದ್ದ. ನಾನು ಬೆಂಬಲಿಸಿದ, ಪ್ರೋತ್ಸಾಹಿಸಿದ ಹಾಗೂ ನನ್ನ ಪ್ರೀತಿಯನ್ನು ಒಪ್ಪಿಕೊಂಡ ವ್ಯಕ್ತಿ, ಒಂದೇ ದಿನದಲ್ಲಿ ಹೇಗೆ ಖಳನಾಯಕನಾದನೆಂದು ನನಗೆ ಅರ್ಥವಾಗಲಿಲ್ಲ. ಈ ನಟನ ಪ್ರಜ್ಞೆ ತಪ್ಪಿದ ಅಭಿಮಾನಿಗಳು ನನ್ನ ವಿರುದ್ಧ ಅಪಪ್ರಚಾರ ಮತ್ತು ಅಸಭ್ಯ ಭಾಷೆಯನ್ನು ಹರಡಲು ಪ್ರಾರಂಭಿಸಿದಾಗ, ನನ್ನ ಘನತೆಯನ್ನು ಪ್ರಶ್ನಿಸಲು ಮತ್ತು ಮಾನಹಾನಿ ಮಾಡಲು ಪ್ರಾರಂಭಿಸಿದಾಗ ನಾನು ಆತ್ಮಹತ್ಯೆಯ ಬಗ್ಗೆ ಯೋಚಿಸಿದೆ. ಒಬ್ಬ ಸ್ಯಾಡಿಸ್ಟ್ ಆಗಿರುವ ಆತ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದನು. ಅತಿಯಾದ ಲೈಂಗಿಕ ವ್ಯಸನಿ, ಮಾನಸಿಕ ಅಸ್ವಸ್ಥೆ ಮತ್ತು ಮದ್ಯವ್ಯಸನಿ ಸೇರಿದಂತೆ ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿದನು. ನಿರಂತರ ನೋವನ್ನು ಸಹಿಸಲಾಗದೆ ಮತ್ತು ಅಪಪ್ರಚಾರಕ್ಕೆ ನನ್ನನ್ನು ಬಲಿಪಶುವನ್ನಾಗಿ ಮಾಡಿದ್ದರಿಂದ, ನಾನು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ನಟಿ ಹೀರಾ ಹೇಳಿದ್ದಾರೆ.

ಅಂದಹಾಗೆ, 1990ರಲ್ಲಿ ನಟಿ ಹೀರಾ ರಾಜ್‌ಗೋಪಾಲ್ ಅವರೊಂದಿಗಿನ ಅಜಿತ್ ಅವರ ಪ್ರೇಮಕಥೆ ವೈರಲ್ ಆಗಿತ್ತು. ಅಜಿತ್ ಮತ್ತು ಹೀರಾ ಮೊದಲು ಕಾದಲ್ ಕೊಟ್ಟೈ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು ಮತ್ತು ಚಿತ್ರೀಕರಣದ ಸಮಯದಲ್ಲಿ ಆಳವಾಗಿ ಪ್ರೀತಿಸುತ್ತಿದ್ದರು. ನಂತರ, ಅವರು ‘ತೋಡರಂ’ ಎಂಬ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಆದಾಗ್ಯೂ, ಅವರ ಪ್ರೇಮಕಥೆಯು ಮದುವೆಗೆ ಕಾರಣವಾಗಲಿಲ್ಲ. ಹೀರಾ ಅವರ ತಾಯಿ ಮದುವೆಯನ್ನು ನಿರಾಕರಿಸಿದರು. ಹೀಗಾಗಿ ಅವರ ಪ್ರೇಮಕಥೆ ಅಂತ್ಯವಾಯಿತು ಎಂದು ಕಾಲಿವುಡ್ ಮೂಲಗಳು ತಿಳಿಸಿವೆ.

ಆದಾಗ್ಯೂ, ಅಜಿತ್ ಅವರನ್ನು ತ್ಯಜಿಸಿದರು ಎಂಬ ವದಂತಿಗಳೂ ಇವೆ. ಆಕೆ ಡ್ರಗ್ಸ್​ ವ್ಯಸನಿ ಆಗಿದ್ದಳು. ಹೀಗಾಗಿ ಅಜಿತ್​ ಆಕೆಯಿಂದ ಬೇರ್ಪಟ್ಟರು ಎಂಬ ವದಂತಿಗಳೂ ಇವೆ. ಇಬ್ಬರು ಬೇರೆಯಾದ ಕೆಲವು ವರ್ಷಗಳ ನಂತರ, ಅಜಿತ್ ಅಬರು ನಟಿ ಶಾಲಿನಿ ಅವರನ್ನು ಪ್ರೀತಿಸಿ ವಿವಾಹವಾದರು. ಅವರಿಗೆ ಅನುಷ್ಕಾ ಮತ್ತು ಆದ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ನಟಿಯಾಗಿ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾಗ ಅಜಿತ್​ ಅವರನ್ನು ವಿವಾಹವಾದ ಶಾಲಿನಿ, ಆ ನಂತರ ಚಲನಚಿತ್ರಗಳಿಗೆ ವಿದಾಯ ಹೇಳಿದರು.

ಅಂದಹಾಗೆ, ಅಜಿತ್​ ಏಪ್ರಿಲ್​ 28ರಂದು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಅದೇ ದಿನ ಅವರ ಹಳೆಯ ಲವ್​ ಸ್ಟೋರಿ ವಿವಾದವನ್ನು ಏಕೆ ಬಹಿರಂಗಪಡಿಸಲಾಗಿದೆ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಇದರ ಹಿಂದೆ ನಟ ವಿಜಯ್ ಅವರ ಅಭಿಮಾನಿಗಳಿದ್ದಾರೆ ಎಂದು ಅಜಿತ್​ ಫ್ಯಾನ್ಸ್​ ಆಪಾದನೆ ಮಾಡಿದ್ದಾರೆ. ಅಲ್ಲದೆ, ಹೀರಾ ರಾಜಗೋಪಾಲ್ ಬಂದು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಅಜಿತ್​ ಫ್ಯಾನ್ಸ್​ ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಮತ್ತೊಮ್ಮೆ ಅಜಿತ್​ ಮತ್ತು ವಿಜಯ್​ ಫ್ಯಾನ್ಸ್​ ನಡುವೆ ಕಿತ್ತಾಟ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net