ವಿರಾಟ್​ ಕೊಹ್ಲಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಫಿಲ್​ ಸಾಲ್ಟ್! ವಿಡಿಯೋ ವೈರಲ್​... ​Phil Salt

​Phil Salt
Published on

Phil Salt : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ಸ್ಟಾರ್ ಬ್ಯಾಟ್ಸ್​ಮನ್​ ಫಿಲ್ ಸಾಲ್ಟ್​, ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ನನ್ನ ಸ್ನೇಹಿತರಲ್ಲ ಎನ್ನುವ ಮೂಲಕ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಆದರೆ, ಅಚ್ಚರಿ ಸಂಗತಿ ಏನೆಂದರೆ, ತಕ್ಷಣವೇ ಯೂಟರ್ನ್​ ತೆಗೆದುಕೊಂಡ ಸಾಲ್ಟ್​, ಕ್ರಿಕೆಟ್ ಆಡುವ ಪ್ರತಿಯೊಬ್ಬರೂ ನನ್ನ ಸ್ನೇಹಿತರೇ ಎಂದಿದ್ದಾರೆ.

ಇತ್ತೀಚೆಗೆ ಮಿಸ್ಟರ್​​ ನಾಗ್ಸ್ ಜತೆಗೆ ನಡೆದ ಸಂದರ್ಶನದಲ್ಲಿ ಸಾಲ್ಟ್​ ಮಾತನಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆರ್​ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ವೈರಲ್​​ ಆಗುತ್ತಿದೆ.

ಫಿಲ್​ ಸಾಲ್ಟ್ ಹರಾಜಿನಲ್ಲಿ​ ಆರ್​ಸಿಬಿ ಪಾಲಾದಾಗ ಉಪ್ಪಿಗಿಂತ ರುಚಿ ಬೇರೆಯಿಲ್ಲ ಎಂಬ ಹಾಡಿನ ಮೂಲಕ ಸಾಲ್ಟ್​ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು. ಇದು ಸಾಲ್ಟ್​ ಅವರ ಅರಿವಿಗೆ ಬಂದಿದೆ. ಅವರು ಕೂಡ ವಿಡಿಯೋದಲ್ಲಿ ಹಾಡಿದ್ದಾರೆ. ಅಲ್ಲದೆ, ಆರ್​ಸಿಬಿ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಂಥಾ ಅಭಿಮಾನಿಗಳನ್ನು ನಾನು ಹಿಂದೆಂದೂ ನೋಡಿಯೇ ಇಲ್ಲ ಎಂದಿದ್ದಾರೆ.

ನಿಮ್ಮ ಒಂದು ಸಂದರ್ಶನದಲ್ಲಿ ಐಪಿಎಲ್‌ನಲ್ಲಿ ನನಗೆ ಸ್ನೇಹಿತರಿಲ್ಲ ಎಂದು ಹೇಳಿದ್ದಿರಿ. ಹಾಗಾದರೆ, ನೀವು ವಿರಾಟ್ ಜೊತೆ ಆಟವಾಡುವಾಗ, ನೀವು ಅವರೊಂದಿಗೆ ಸ್ನೇಹಿತರಾಗುತ್ತೀರಾ ಅಥವಾ ಇಲ್ಲವೇ ಎಂದು ಮಿ. ನಾಗ್ಸ್​ ಇದೇ ಸಂದರ್ಭದಲ್ಲಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಾಲ್ಟ್​, ಆರಂಭದಲ್ಲಿ ಇಲ್ಲ ಸಹೋದ್ಯೋಗಿಯಷ್ಟೇ ಎನ್ನುತ್ತಾ ನಕ್ಕರು. ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದಾಗ, ನಾನು ಕ್ರಿಕೆಟ್ ಆಡಿದ ಪ್ರತಿಯೊಬ್ಬರೂ ನನ್ನ ಸ್ನೇಹಿತರು ಎಂದರು.

ಅಂದಹಾಗೆ ಈ ಸಂದರ್ಶನದಲ್ಲಿ ಸಾಕಷ್ಟು ಫನ್ನಿಯಾಗಿ ಸಾಲ್ಟ್​ ಮಾತನಾಡಿದರು. ಕೊನೆಯಲ್ಲಿ ಮಿ. ನಾಗ್ಸ್​ ಕಿರಿಕಿರಿಯನ್ನು ಸಹಿಸಲಾರದೇ ಕೋಪದಿಂದ ಎದ್ದು ಹೋದರು. ಆದರೆ, ಅದು ಕೂಡ ತಮಾಷೆಗೆ ಮಾಡಿದ್ದು ಅನ್ನೋದೇ ನಿಜ ಸಂಗತಿ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.

ಇನ್ನು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಸಾಲ್ಟ್​ ಆಡಲಿಲ್ಲ. ಇದಕ್ಕೆ ಕಾರಣ ಕೊಟ್ಟ ನಾಯಕ ರಜತ್​ ಪಾಟೀದಾರ್​, ಜ್ವರದಿಂದ ಬಳಲುತ್ತಿರುವ ಕಾರಣ, ಸಾಲ್ಟ್​ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದರು. ಸದ್ಯ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಆರ್​ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪಂದ್ಯ ಮೇ 3 ರಂದು ಸಿಎಸ್​ಕೆ ವಿರುದ್ಧ ತವರು ಮೈದಾನದಲ್ಲಿ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net