ತೆಲುಗು ಭಾಷೆಯಲ್ಲಿ ಬಿಡುಗಡೆಗೊಂಡ 777 ಚಾರ್ಲಿ; ಮೊದಲ ಪ್ರಸಾರದಲ್ಲಿ ಗಳಿಸಿದ TRP ಎಷ್ಟು ಗೊತ್ತಾ?

charlie 777
Published on

ಆಂಧ್ರಪ್ರದೇಶ: 2022 ರಲ್ಲಿ ರಕ್ಷಿತ್​ ಶೆಟ್ಟಿ(Rakshith Shetty) ನಟಿಸಿದ ಕನ್ನಡ ಚಿತ್ರರಂಗದ ಬ್ಲಾಕ್‌ಬಸ್ಟರ್‌(Blockbuster) ಚಿತ್ರ 777 ಚಾರ್ಲಿ ಇದೀಗ ತೆಲುಗು ಭಾಷೆಯಲ್ಲಿ ಬಿಡುಗಡೆಗೊಂಡಿದ್ದು, ಮೊದಲ ಪ್ರಸಾರದಲ್ಲಿ ಉತ್ತಮ ಟಿಆರ್​ಪಿಯನ್ನು ಪಡೆದುಕೊಂಡಿದೆ.

ಸ್ಯಾಂಡಲ್‌ವುಡ್(Sandalwood) ಬ್ಲಾಕ್‌ಬಸ್ಟರ್‌ ಸಿನಿಮಾ ತೆಲುಗು ಭಾಷೆಯಲ್ಲಿ(Telugu Language) ಪ್ರಸಾರವಾಗಿದ್ದು, ಮೊದಲ ಪ್ರಸಾರದಲ್ಲಿ 3.29 ಟಿಆರ್‌ಪಿ(TRP) ರೇಟಿಂಗ್​ ಗಳಿಸಿದೆ. ಚಲನಚಿತ್ರವು ಯೋಗ್ಯವಾದ ಪ್ರತಿಕ್ರಿಯೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

2022 ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಂಡ ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ನಟಿಸಿದ '777 ಚಾರ್ಲಿ'(777 Charlie) ಚಿತ್ರ ಪ್ರೇಕ್ಷಕರ ಮನವನ್ನು ಭಾವನಾತ್ಮಕವಾಗಿ ತಲುಪವಲ್ಲಿ ಯಶಸ್ವಿಯಾಯಿತು. ಕೇವಲ ಕನ್ನಡ ಮಾತ್ರವಲ್ಲದೆ, ಇತರ ಭಾರತೀಯ ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆಯಾಗಿ ಯಶಸ್ಸನ್ನು ಕಂಡಿತು.

777 ಚಾರ್ಲಿ ಚಿತ್ರವನ್ನು ಕಿರಣರಾಜ್.ಕೆ ನಿರ್ದೇಶಿಸಿದ್ದು, ಪರಂವಾ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ, ನಟಿ ಸಂಗೀತಾ ಶೃಂಗೇರಿ, ದಾನಿಶ್ ಸೇಟ್, ಬಾಬಿ ಸಿಂಹ, ಮತ್ತು ರಾಜ್.ಬಿ.ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net