

ಉತ್ತರಪ್ರದೇಶ: ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವರದಕ್ಷಿಣೆ(Dowry) ಬೇಡಿಕೆಗಳನ್ನು ಪೂರೈಸಲು ವಿಫಲವಾದ ವಧುವಿನ ಕುಟುಂಬಸ್ಥರಿಗೆ ಮದುವೆಯನ್ನು ರದ್ದುಗೊಳಿಸುವ ಮೂಲಕ ವರ(Groom) ಶಾಕ್ ನೀಡಿದ್ದಾನೆ.
ಉತ್ತರಪ್ರದೇಶದ(Uttarpradesh) ಕಾನ್ಪುರದಲ್ಲಿ ವರನೊಬ್ಬ ತಾನು ಮದುವೆಯಾಗುವ ಹುಡುಗಿಯ ಕುಟುಂಬಕ್ಕೆ ತನಗೆ ಬೇಕಾದ ಅಗತ್ಯ ವರದಕ್ಷಿಣೆ ಬೇಡಿಕೆಗಳನ್ನು ಮದುವೆಗೆ ಮುಂಚಿತವಾಗಿ ಈಡೇರಿಸಲು ತಿಳಿಸಿದ್ದನ್ನು. ಆದ್ರೆ, ವಧುವಿನ ಕುಟುಂಬ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಈಡೇರಿಸಲು ವಿಫಲವಾದ ಕಾರಣ ವರ ಕೊನೆಯ ಕ್ಷಣದಲ್ಲಿ ತನ್ನ ಮದುವೆಯನ್ನು ರದ್ದುಗೊಳಿಸಿದ್ದಾನೆ.
ಮದುವೆ ಮಂಟಪದಲ್ಲಿ ವಧುವಿನ ಕುಟುಂಬಕ್ಕೆ ಬುಲೆಟ್ ಬೈಕ್ ಹಾಗೂ 1 ಲಕ್ಷ ರೂ. ನಗದು ನೀಡುವಂತೆ ವರ ಬೇಡಿಕೆ ಇಟ್ಟಿದ್ದ. ಆದ್ರೆ, ಯುವತಿಯ ಕುಟುಂಬಸ್ಥರು ಆತನ ಬೇಡಿಕೆಗಳನ್ನು ಪೂರೈಸಲು ವಿಫಲವಾದ ಕಾರಣ ಮದುವೆ ಬೇಡ ಎಂದು ತಾಳಿ ಕಟ್ಟದೆ ಮದುವೆಯನ್ನು ನಿಲ್ಲಿಸಿದ್ದಾನೆ. ವರನ ವಿರುದ್ಧ ವಧುವಿನ ತಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ರೂರಾ ಪೊಲೀಸರು ವರ ಮತ್ತು 49 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ,(ಏಜೆನ್ಸೀಸ್).