ವಿರಾಟ್​ ಕೊಹ್ಲಿ ಈಗ ಸಾವಿರ ಕೋಟಿ ಒಡೆಯ!

kohli (1)
Published on

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕ್ರಿಕೆಟ್​ ಮೈದಾನದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿರುವ ನಡುವೆ, ಹಣ ಸಂಪಾದನೆಯಲ್ಲೂ ಸಾವಿರ ಕೋಟಿ ರೂಪಾಯಿ ಒಡೆಯರಾಗುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಸಾಮಾಜಿಕ ವ್ಯಾಪಾರ ವೇದಿಕೆ "ಸ್ಟಾಕ್​ಗ್ರೋ' ವರದಿಯ ಪ್ರಕಾರ, ವಿರಾಟ್​ ಕೊಹ್ಲಿ ಈಗ ಒಟ್ಟು 1,050 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿದ್ದಾರೆ.

34 ವರ್ಷದ ಕೊಹ್ಲಿ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಎ ಪ್ಲಸ್​ ಶ್ರೇಣಿಯ ಒಪ್ಪಂದ ಹೊಂದಿದ್ದು, ಅದರನ್ವಯ ವಾರ್ಷಿಕ 7 ಕೋಟಿ ರೂ. ಸಂಪಾದನೆ ಹೊಂದಿದ್ದಾರೆ. ಇನ್ನು ಭಾರತ ತಂಡದ ಪರ ಆಡುವ ಪ್ರತಿ ಟೆಸ್ಟ್​ , ಏಕದಿನ, ಟಿ20 ಪಂದ್ಯಗಳಿಗೆ ಕ್ರಮವಾಗಿ 15, 6 ಮತ್ತು 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಜತೆಗಿನ ಒಪ್ಪಂದದಿಂದ ವಾರ್ಷಿಕ 15 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲೂ ವಾಣಿಜ್ಯ ಪೋಸ್ಟ್​ಗಳಿಂದ ಹಣ ಗಳಿಸುವ ಅವರು, ಇನ್​ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್​ಗೆ 8.9 ಕೋಟಿ ರೂ. ಮತ್ತು ಟ್ವಿಟರ್​ನಲ್ಲಿ ಪ್ರತಿ ಟ್ವೀಟ್​ಗೆ 2.5 ಕೋಟಿ ರೂ. ಚಾರ್ಜ್​ ಮಾಡುತ್ತಾರೆ. ಕೊಹ್ಲಿ ಮುಂಬೈನಲ್ಲಿ 34 ಕೋಟಿ ರೂ. ಮತ್ತು ಗುರುಗ್ರಾಮದಲ್ಲಿ 80 ಕೋಟಿ ರೂ. ಮೌಲ್ಯದ ಮನೆಯನ್ನು ಹೊಂದಿದ್ದಾರೆ. ಇದಲ್ಲದೆ ಒಟ್ಟು 31 ಕೋಟಿ ರೂ. ಮೌಲ್ಯದ ವಿವಿಧ ಕಾರುಗಳನ್ನು (ಆಡಿ, ಾರ್ಚೂನರ್​, ರೇಂಜ್​ ರೋವರ್​, ಆರ್​8 ವಿ10 ಪ್ಲಸ್​, ಆರ್​8 ಎಲ್​ಎಂಎಕ್ಸ್​, ಎ8 ಎಲ್​, ಕ್ಯೂ8, ಕ್ಯೂ7, ಆರ್​ಎಸ್​ 5, ಎಸ್​5) ಹೊಂದಿದ್ದಾರೆ.

ಕೊಹ್ಲಿ ಒಟ್ಟು 18 ಬ್ರಾಂಡ್​ಗಳ ಪ್ರಚಾರ ರಾಯಭಾರಿಯಾಗಿದ್ದು, ಪ್ರತಿ ಜಾಹೀರಾತಿನ ಚಿತ್ರೀಕರಣಕ್ಕೆ ದಿನವೊಂದಕ್ಕೆ 7.50ರಿಂದ 10 ಕೋಟಿ ರೂ.ವರೆಗೆ ಚಾರ್ಜ್​ ಮಾಡುತ್ತಾರೆ. ಈ ರೀತಿ ಜಾಹೀರಾತುಗಳಿಂದಲೇ ಸುಮಾರು 175 ಕೋಟಿ ರೂ. ಸಂಪಾದಿಸುತ್ತಾರೆ. ಕೊಹ್ಲಿ ಕೆಲ ಸ್ಟಾರ್ಟ್​ಅಪ್​ಗಳಲ್ಲಿ ಹೂಡಿಕೆ ಮಾಡಿದ್ದರೆ, ಇನ್ನು ಕೆಲ ಸ್ಟಾರ್ಟ್​ಅಪ್​ ಬ್ರಾಂಡ್​ಗಳ ಮಾಲೀಕರೂ ಆಗಿದ್ದಾರೆ. ಇನ್ನು ಐಎಸ್​ಎಲ್​ ುಟ್​ಬಾಲ್​(ಎ್​ಸಿ ಗೋವಾ), ಟೆನಿಸ್​ ಮತ್ತು ಪ್ರೊ ಕುಸ್ತಿ ಲೀಗ್​ಗಳಲ್ಲಿ ತಂಡಗಳ ಸಹ&ಮಾಲೀಕತ್ವವನ್ನೂ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net