6 ಮಂದಿ ಬಾಲಿವುಡ್​ ಸ್ಟಾರ್​ಗಳ ಎದೆಯಲ್ಲಿ ಢವಢವ; ತಮ್ಮ ಪರ ವಕೀಲರನ್ನು ಕರೆಸಿ ಚರ್ಚೆ

Bollywood
Published on

ಮುಂಬೈ: ಬಾಲಿವುಡ್​ನಲ್ಲೀಗ ಡ್ರಗ್​ ಮಾಫಿಯಾ ಭುಗಿಲೇಳುತ್ತಿದ್ದಂತೆ, ಸ್ಟಾರ್ ಕಲಾವಿದರ ಹೆಸರುಗಳೂ ತಳುಕು ಹಾಕಿಕೊಂಡಿವೆ. ಈಗಾಗಲೇ ರಿಯಾ ಸೇರಿ ಹಲವರು ಬಂಧಿತರಾದರೆ, ಹೊಸದಾಗಿ ದೀಪಿಕಾ ಪಡುಕೋಣೆಯೂ ಈ ಮಾಫಿಯಾದಲ್ಲಿದ್ದಾರೆ ಎಂಬ ಅನುಮಾನ ಮೂಡಿದೆ. ಇದೆಲ್ಲದರ ಬೆನ್ನಲ್ಲೇ ಬಾಲಿವುಡ್​ನ ಸ್ಟಾರ್ ನಟರ ಎದೆಯಲ್ಲೂ ಢವಢವ ಶುರುವಾಗಿದೆ.

ದೀಪಿಕಾ ಪಡುಕೋಣೆಗೆ ಡ್ರಗ್​ ಪೂರೈಕೆ ಮಾಡಿದ್ದಾರೆ ಎಂಬುದಕ್ಕೆ ವಾಟ್ಸಾಪ್​ ಚಾಟ್​ ಸಾಕ್ಷ್ಯ ಆಧರಿಸಿ ಅವರ ಮ್ಯಾನೇಜರ್​ ಕರೀಷ್ಮಾ ಪ್ರಕಾಶ್​ಗೆ ಈಗಾಗಲೇ ಎನ್​ಸಿಬಿ ಸಮನ್​ ನೀಡಿ ವಿಚಾರಣೆಗೆ ಹಾಜರಾಗುವಂತೆ ಕೋರಿದೆ. ಈ ಎಲ್ಲ ಘಟನೆಗಳ ಬೆನ್ನಲ್ಲೇ ಬಾಲಿವುಡ್​ನ 6 ಮಂದಿ ಸ್ಟಾರ್ ನಟರು ಇದೀಗ ತಮ್ಮ ಪರ ವಕೀಲರನ್ನು ಕರೆಸಿ ಮುಂದಿನ ಬೆಳವಣಿಗೆಗಳಿಗೆ ಈಗಲೇ ತಯಾರಿ ನಡೆಸಿದ್ದಾರಂತೆ.

ಯಾವಾಗ ಏನಾಗುತ್ತೋ ಎಂದು ಬುಡಕ್ಕೆ ಬರುವುದಕ್ಕೂ ಮುನ್ನ ಎಲ್ಲ ರೀತಿಯಲ್ಲಿ ಸಿದ್ಧರಾಗಬೇಕು ಎಂಬ ದೃಷ್ಟಿಯಿಂದ ಈಗಲೇ ವಕೀಲರೊಂದಿಗೆ ಮುಂದಿನ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಒಂದು ವೇಳೆ ಸಮನ್​ ನೀಡಿದರೆ ಏನು ಮಾಡಬೇಕು? ಏನೆಲ್ಲ ಉತ್ತರ ನೀಡಬೇಕು ಎಂಬುದನ್ನು ವಕೀಲರಿಂದ ಮಾಹಿತಿ ಪಡೆಯುತ್ತಿದ್ದಾರಂತೆ. ಸದ್ಯ ಆ ಆರು ಕಲಾವಿದರು ಯಾರು ಎಂಬುದಕ್ಕೆ ಸದ್ಯಕ್ಕೆ ಮಾಹಿತಿ ಇಲ್ಲ. ಎನ್​ಸಿಬಿ ಸಮನ್​ ನೀಡಿದ ಬಳಿಕವಷ್ಟೇ ಅದು ಗೊತ್ತಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net