ಲೇಡಿ ಸೂಪರ್​ಸ್ಟಾರ್ ನಯನತಾರಾಗೆ 4 ಕೋಟಿ ರೂ. ಸಂಭಾವನೆ?

Chiru
Published on

ಇತ್ತೀಚಿನ ದಿನಗಳಲ್ಲಿ ಪಕ್ಕದ ತೆಲುಗು, ತಮಿಳು ಚಿತ್ರರಂಗದಲ್ಲಿ ನಾಯಕರ ಜತೆಗೆ ನಾಯಕಿಯರ ಸಂಭಾವನೆಯೂ ದ್ವಿಗುಣವಾಗುತ್ತಿದೆ. ಇದೀಗ ಆ ಸಾಲಿಗೆ ಲೇಡಿ ಸೂಪರ್​ಸ್ಟಾರ್ ನಯನತಾರಾ ಹೆಸರೂ ಸೇರಿಕೊಂಡಿದೆ. ಚಿರಂಜೀವಿ ನಟಿಸಲಿರುವ ‘ಗಾಡ್​ಫಾದರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಡಿಮಾಂಡ್ ಮಾಡಿದ್ದಾರಂತೆ ನಯನ್!

ಈಗಾಗಲೇ ನಯನತಾರಾ ಕೇಳಿದಷ್ಟು ಹಣ ನೀಡಲು ನಿರ್ಮಾಣ ಸಂಸ್ಥೆಯೂ ಮುಂದೆಬಂದಿದೆಯಂತೆ. ಇನ್ನೇನು ಶೀಘ್ರದಲ್ಲಿ ಶೂಟಿಂಗ್​ನಲ್ಲಿಯೂ ಅವರು ಭಾಗವಹಿಸಲಿ ದ್ದಾರೆ. ಅಂದಹಾಗೆ, ‘ಗಾಡ್​ಫಾದರ್’ ಮಲಯಾಳಂನಲ್ಲಿ ತೆರೆಗೆ ಬಂದಿದ್ದ ‘ಲೂಸಿಫರ್’ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ಮೋಹನ್​ಲಾಲ್ ಪ್ರಧಾನ ಪಾತ್ರದಲ್ಲಿದ್ದರು.

ತೆಲುಗಿನಲ್ಲಿ ಚಿರಂಜೀವಿ ಆ ಪಾತ್ರ ನಿಭಾಯಿಸಲಿದ್ದಾರೆ. ಮಲಯಾಳಂ ಹೊರತುಪಡಿಸಿ ಬೇರೆಬೇರೆ ಭಾಷೆಗೂ ಈ ಸಿನಿಮಾ ಡಬ್ ಆಗಿ 2022ರ ಮಧ್ಯೆದಲ್ಲಿ ತೆರೆಗೆ ಬರಲಿದೆಯಂತೆ. ಮೋಹನ್ ರಾಜಾ ನಿರ್ದೇಶನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net