ಹೌದು, ಚಿತ್ರದಲ್ಲಿನ ಯಶ್ ಬಗ್ಗೆ ತಿಳಿಸುವ ಮತ್ತೊಂದು 'ಸುಲ್ತಾನ್' ಎಂಬ ಹಾಡು ರಿಲೀಸ್ ಆಗಲು ರೆಡಿಯಾಗಿದೆ. ಅಂದಹಾಗೆ, 'ಕೆಜಿಎಫ್-2' ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗುತ್ತಿದ್ದರೆ, ಏಪ್ರಿಲ್ 13 ಕ್ಕೆ 'ಸುಲ್ತಾನ್' ಹಾಡು ರಿಲೀಸ್ ಆಗಲಿದೆ. ಈ ಹಾಡಿನ ರಿಲೀಸ್ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ರಿಲೀಸ್ ಆದ 'ತೂಫಾನ್' ಹಾಡು ಒಂದು ಪುಟ್ಟ ಕಥೆಯಂತೆ ಇತ್ತು. ಆದರೆ, ಧೈರ್ಯ ಇಲ್ಲದ ಬಡಪಾಯಿಗಳಿಗೆ ಯಶ್ ಶಕ್ತಿಯಾಗಿ ನಿಂತ ಬಗ್ಗೆ ಕಥೆ ಹೇಳುತ್ತಂತೆ 'ಸುಲ್ತಾನ್' ಹಾಡು.