ಅಂದಹಾಗೆ, ದಳಪತಿ ವಿಜಯ್ ಅವರು ಅಭಿನಯಿಸಿರುವ 'ಬೀಸ್ಟ್' ಸಿನಿಮಾ ನಾಳೆ ರಿಲೀಸ್ ಆಗಲು ರೆಡಿಯಾಗಿದೆ. ಹಾಗಾಗಿ, ಈ ಸಿನಿಮಾದ ಪ್ರಚಾರದ ಅಂಗವಾಗಿ ವಿಜಯ್ ತಮಿಳಿನ ಸನ್ ಟಿವಿ ಅವರಿಗೆ ಒಂದು ಅಪರೂಪದ ಸಂದರ್ಶನ ನೀಡಿದ್ದಾರೆ. ಆದರೆ, 10 ವರ್ಷಗಳ ಬಳಿಕ ನಟ ವಿಜಯ್ ಅವರು ಕೊಟ್ಟ ಈ ಟಿವಿ ಸಂದರ್ಶನದಲ್ಲಿ ಕೇವಲ 'ಬೀಸ್ಟ್' ಬಗ್ಗೆ ಅಲ್ಲದೇ ಅವರ ರಾಜಕೀಯ, ತಮಿಳು ಚಿತ್ರರಂಗ, ತಮ್ಮ ಕುಟುಂಬದ ಬಗ್ಗೆ ಸೇರಿ ಹಲವು ವಿಚಾರಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇನ್ನು, ನಟನ ಈ ಇಡೀ ಸಂದರ್ಶನ ಎಲ್ಲರ ಗಮನ ಸೆಳೆದರು, ಸದ್ಯ ಅವರ ಅಭಿಮಾನಿಗಳಲ್ಲಿ ಒಂದು ವಿಚಾರದ ಕುರಿತು ಮಾತ್ರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದುವೇ, ನಟನ ರಾಜಕೀಯ ಪ್ರವೇಶ. ಇನ್ನು, ನಟ ವಿಜಯ್ ಅವರ ಈ ಸಂದರ್ಶನಕ್ಕೆ 'ಬೀಸ್ಟ್' ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರೇ ನಿರೂಪಣೆ ಮಾಡಿದ್ದಾರೆ.