

ಮುಂಬೈ: ಇಂಟರ್ನೆಟ್ ಮೂವಿ ಡೇಟಬೇಸ್ ಕೆಲವು ವರ್ಷಗಳಿಂದಿತ್ತೀಚೆಗೆ ಪ್ರತೀ ವರ್ಷ ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯನ್ನು ಪ್ರಕಟಿಸುವುದು ಗೊತ್ತೇ ಇದೆ. ವಿಶೇಷವೆಂದರೆ, ಈ ಬಾರಿ ಟಾಪ್ 10 ಪಟ್ಟಿಯಲ್ಲಿ 9 ದಕ್ಷಿಣದ ಚಿತ್ರಗಳಿದ್ದು, ಈ ಪೈಕಿ ಕನ್ನಡದ ಮೂರು ಚಿತ್ರಗಳು ಇರುವುದು ವಿಶೇಷ.
IMDB Top 10 ಪಟ್ಟಿ ಪ್ರಕಟವಾಗಿದ್ದು, ಈ ಪೈಕಿ ಕನ್ನಡದ ಮೂರು ಚಿತ್ರಗಳಿವೆ. ಈ ಪೈಕಿ 'ಕೆಜಿಎಫ್ 2' ಚಿತ್ರವು ಮೂರನೇ ಸ್ಥಾನದಲ್ಲಿದ್ದರೆ, 'ಕಾಂತಾರ' ಐದನೇ ಸ್ಥಾನದಲ್ಲಿದೆ. '777ಚಾರ್ಲಿ' ಚಿತ್ರವು 10ನೇ ಸ್ಥಾನದಲ್ಲಿದೆ. ಇನ್ನು. ಮೊದಲ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಚಿತ್ರವಿದೆ.
ಈ 10 ಚಿತ್ರಗಳ ಪೈಕಿ ಬಾಲಿವುಡ್ನಿಂದ 'ದಿ ಕಾಶ್ಮೀರ್ ಫೈಲ್ಸ್' ಮಾತ್ರ ಇದೆ. ಮಿಕ್ಕಂತೆ ಎಲ್ಲವೂ ದಕ್ಷಿಣದ ಚಿತ್ರಗಳೇ ಈ ಪಟ್ಟಿಯಲ್ಲಿವೆ. ಮಿಕ್ಕಂತೆ ಕನ್ನಡದ ಮೂರು, ತಮಿಳಿನ ಮೂರು ಮತ್ತು ತೆಲುಗಿನ ಮೂರು ಚಿತ್ರಗಳಿವೆ.
ಈ ಸಂಬಂಧ IMDB ಕಡೆಯಿಂದ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ಗೆ ಟ್ರೋಫಿ ಬಂದಿದ್ದು, ರಕ್ಷಿತ್ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
IMDb 2022ರ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿ ಹೀಗಿದೆ
1) RRR
2) ದಿ ಕಾಶ್ಮೀರ್ ಫೈಲ್ಸ್
3) K.G.F: ಚಾಪ್ಟರ್ 2
4) ವಿಕ್ರಂ
5) ಕಾಂತಾರ
6) ರಾಕೆಟ್ರಿ: ದಿ ನಂಬಿ ಎಫೆಕ್ಟ್
7) ಮೇಜರ್
8) ಸೀತಾ ರಾಮಂ
9) ಪೊನ್ನಿಯನ್ ಸೆಲ್ವನ್ : ಭಾಗ ಒಂದು
10) 777 ಚಾರ್ಲಿ