'ವಿಜಯಾನಂದ' ಚಿತ್ರ ವೀಕ್ಷಿಸಿ ಶುಭ ಹಾರೈಸಿದ ರಾಜರ್ಷಿ ವೀರೇಂದ್ರ ಹೆಗ್ಗಡೆ..!

vijayananda
Published on

ಹುಬ್ಬಳ್ಳಿ: ರಾಜ್ಯಾದ್ಯಂತ ಯಶಸ್ವೀಯಾಗಿ ಪ್ರದರ್ಶನ ಕಾಣುತ್ತಿರುವ 'ವಿಜಯಾನಂದ' ನೋಡಿ ನಾಡಿನ ಜನರು ಪುಳಕಿತರಾಗುತ್ತಿದ್ದಾರೆ. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ.

'ವಿಜಯಾನಂದ' ಚಿತ್ರ ವೀಕ್ಷಿಸಿ ಶುಭಹಾರೈಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಿಗ್ವಿಜಯ ನ್ಯೂಸ್ ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಹುಬ್ಬಳ್ಳಿಯ ಸಿನಿಪೊಲಿಸ್ ಚಿತ್ರಮಂದಿರದಲ್ಲಿ ಬಯೋಪಿಕ್ ವೀಕ್ಷಿಸಿದ ವೀರೇಂದ್ರ ಹೆಗಡೆ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಡಾ. ಆನಂದ ಸಂಕೇಶ್ವರ ಅವರನ್ನು ಡಾ.ವೀರೇಂದ್ರ ಹೆಗ್ಗಡೆ ಸನ್ಮಾನಿಸಿ ಅಭಿನಂದಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ, 'ಯೋಗ ಇದ್ರೆ ಸಾಲದು ಯೋಗ್ಯತೆ ಬೇಕು ಅನ್ನೋದು ನಿಜ. ಈ ಚಿತ್ರ ನೋಡಿದಾಗ ಯೋಗವೂ ಇರಬೇಕು ಮತ್ತು ಯೋಗ್ಯತೆಯೂ ಇರಬೇಕು ಅನ್ನಿಸುತ್ತೆ. ಯೋಗ ಇದ್ರೆ ಮಾತ್ರ ಸವಾಲುಗಳನ್ನ ಎದುರಿಸಲು ಸಾಧ್ಯ. ಯೋಗ ಅನ್ನೋದು ಪೂರ್ವಾರ್ಜಿತದಿಂದಲೇ ಬರುತ್ತೆ. ಚಿತ್ರ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಛಲ, ಹಠ ಕೇವಲ ನಕಾರಾತ್ಮ ಕೆಲಸಗಳಿಗೆ ಉಪಯೋಗಿಸದೇ ಸಕಾರಾತ್ಮಕ ಕೆಲಸಗಳಿಗೆ ಉಪಯೋಗಿಸಬೇಕು ಅನ್ನೋದು ಈ ಚಿತ್ರದಿಂದ ಗೊತ್ತಾಗುತ್ತೆ. ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವಂತಹ ಹಾಗೂ ಆದರ್ಶವಾದ ಚಿತ್ರ ಇದಾಗಿದೆ' ಎಂದು ವಿಜಯಾನಂದ ಚಿತ್ರವನ್ನು ಶ್ಲಾಘಿಸಿ ಹಾಡಿ ಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net