

ಬರೇಲಿ: ತನ್ನನ್ನು ತಾನು ಬ್ರಿಟನ್ನವಳು ಎಂದು ಪರಿಚಯಿಸಿಕೊಂಡ ಯುವತಿಯನ್ನು ನಂಬಿದ ಕೇರಳದ ಕ್ರಿಶ್ಚಿಯನ್ ಪಾದ್ರಿಗೆ ಬಹುದೊಡ್ಡ ಶಾಕ್ ಎದುರಾಗಿದೆ.
ಈ ಪಾದ್ರಿಗೆ ಆಗಸ್ಟ್ 28ರಂದು ಯುವತಿಯೋರ್ವಳ ಹೆಸರಿನಿಂದ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂತು. ಪ್ರೊಫೈಲ್ ನೋಡಿದರೆ ಬ್ರಿಟಿಷ್ ಪ್ರಜೆ ಎಂದಿತ್ತು. ಇಬ್ಬರೂ ಫೇಸ್ಬುಕ್ನಲ್ಲಿ ಫ್ರೆಂಡ್ ಆಗಿದ್ದಷ್ಟೇ ಅಲ್ಲದೆ ಮೆಸೆಂಜರ್ನಲ್ಲಿ ಚಾಟ್ ಕೂಡ ಶುರುವಾಗಿತ್ತು. ಹಾಗೆ ಮೊಬೈಲ್ ನಂಬರ್, ಇ ಮೇಲ್ ಐಡಿಗಳ ವಿನಿಮಯವೂ ಆಗಿತ್ತು.
ನಂತರ ಒಂದು ದಿನ ಯುವತಿ ಪಾದ್ರಿಗೆ ಮೆಸೇಜ್ ಮಾಡಿ..ನೀವು ನನಗೆ ತುಂಬ ಇಷ್ಟವಾಗಿದ್ದೀರಿ. ನಿಮಗೆ ಐಫೋನ್, ಲ್ಯಾಪ್ಟಾಪ್ ಹಾಗೂ ಕೆಲವು ಚಿನ್ನದ ಆಭರಣಗಳನ್ನು ಉಡುಗೋರೆ ಕಳಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದಳು. ಇದನ್ನೂ ಓದಿ: ದಂಪತಿ ಇಬ್ಬರೂ ಒಪ್ಪಿ ವಿಚ್ಛೇದನ ಸಲ್ಲಿಸಿದರೆ ಜೀವನಾಂಶ ಕೊಡಬೇಕಾಗತ್ತಾ?
ಅದಾದ ಮರುದಿನ ವ್ಯಕ್ತಿಯೋರ್ವ ಪಾದ್ರಿಗೆ ಕರೆ ಮಾಡಿ, ನಾನು ನವದೆಹಲಿಯ ಐಜಿಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ. ನಂತರ ಅವರಿಗೆ ಬಂದ ಪಾರ್ಸೆಲ್ ವಿಷಯ ತಿಳಿಸಿ ಬ್ಯಾಂಕ್ ಅಕೌಂಟ್ವೊಂದನ್ನು ಕೊಟ್ಟು ಅದಕ್ಕೆ 3.50 ಲಕ್ಷ ರೂ. ಡಿಪೋಸಿಟ್ ಇಡುವಂತೆ ಹೇಳಿದ. ಅದನ್ನು ನಂಬಿದ ಪಾದ್ರಿ ಆತ ಕೊಟ್ಟ ಅಕೌಂಟ್ ನಂಬರ್ಗೆ ಅಷ್ಟೂ ಹಣವನ್ನೂ ಹಾಕಿದ್ದರು. ಆದರೆ ಎಷ್ಟೇ ದಿನ ಕಾದರೂ ಐಫೋನ್, ಲ್ಯಾಪ್ಟಾಪ್..ಚಿನ್ನಾಭರಣಗಳ ಉಡುಗೋರೆ ಮಾತ್ರ ಬರಲಿಲ್ಲ. ಇದನ್ನೂ ಓದಿ: ಹಿರಿಯಡ್ಕದಲ್ಲಿ ಹಾಡಹಗಲೇ ರೌಡಿಶೀಟರ್ ಕೊಲೆ
ಅನುಮಾನ ಬಂದ ಪಾದ್ರಿ ಆ ಬ್ಯಾಂಕ್ ಅಕೌಂಟ್ ಬಗ್ಗೆ ವಿಚಾರಣೆ ಮಾಡಿದ. ಅದು ಉತ್ತರ ಪ್ರದೇಶದ ಬರೇಲಿಯ ಅಯೋನ್ಲಾ ಎಂಬಲ್ಲಿ ಇರುವ ಎಸ್ಬಿಐ ಬ್ರ್ಯಾಂಚ್ನ ಅಕೌಂಟ್, ಅಕ್ವಿಲ್ ನಬಿ ಎಂಬ ಹೆಸರಿನಲ್ಲಿದೆ ಎಂದು ಗೊತ್ತಾಯಿತು. ಅಲ್ಲಿಗೆ ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾಗಿ ಪಾದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಪೊಲೀಸರು ಯುವತಿ, ಅಕ್ವಿಲ್ ನಬಿ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)