More

    ಉತ್ತುಂಗಕ್ಕೇರಿದೆ ಕರೊನಾ ಸೋಂಕಿನ ಎರಡನೇ ಅಲೆ… ಇರಲಿ ಎಚ್ಚರಿಕೆ

    ನವದೆಹಲಿ: ಕರೊನಾ ವೈರಸ್​ ಸಾಂಕ್ರಾಮಿಕ ರೋಗದ ಎರಡನೇ ಅಲೆ ದೆಹಲಿಯಲ್ಲಿ ಸದ್ಯದ ಮಟ್ಟಿಗೆ ಉತ್ತುಂಗ ತಲುಪಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ಕರೊನಾ ಎರಡನೇ ಅಲೆ ರಾಷ್ಟ್ರ ರಾಜಧಾನಿಯಲ್ಲಿ ಈಗ ಉತ್ತುಂಗದಲ್ಲಿದೆ. ಆದರೆ ಮುಂಬರುವ ದಿನಗಳಲ್ಲಿ ಇದು ಕಡಿಮೆಯಾಗುತ್ತ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ.
    ದೆಹಲಿಯಲ್ಲಿ ಕರೊನಾ ಸಾಂಕ್ರಾಮಿಕ ತಡೆಗಟ್ಟಲು ಕೇಂದ್ರ ಸರ್ಕಾರ ತುಂಬ ಸಹಕಾರ ನೀಡಿದೆ. ಹಾಗೇ ದೆಹಲಿಯ ಜನರೂ ಸಹಕರಿಸಿದ್ದಾರೆ. ಅವರಿಗೆಲ್ಲ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಬ್ಯಾಂಕ್​ ದರೋಡೆಕೋರರ ಚಾಲಕಿತನದಿಂದ ಕಂಗೆಟ್ಟ ಪೊಲೀಸರು: ಸಿಸಿಟಿವಿ ವೀಕ್ಷಿಸಿದವರಿಗೆ ಕಾದಿತ್ತು ಶಾಕ್​!

    ಹಾಗೇ ಪ್ರಧಾನಿ ನರೇಂದ್ರ ಮೋದಿಯರು ನಡೆಸಿದ ಕೋವಿಡ್​-19 ಪರಿಸ್ಥಿತಿ ಅವಲೋಕನಾ ಸಭೆ ತುಂಬ ಫಲಕಾರಿಯಾಗಿದೆ ಎಂದೂ ದೆಹಲಿ ಸಿಎಂ ಹೇಳಿದರು.
    ದೆಹಲಿಯಲ್ಲಿ 2,56,789 ಕರೊನಾ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, 5,087 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ.

    ಬುಧವಾರ ಒಂದೇ ದಿನ 3,714 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದೆ. 36 ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

    ಬೆಂಗಳೂರಿಗೆ ಬರೋರು, ಬೆಂಗಳೂರಿಂದ ಬೇರೆ ಊರಿಗೆ ಹೋಗೋರು ನಾಳೆ ಹುಷಾರು!

    ಮಣ್ಣಲ್ಲಿ ಮಣ್ಣಾದ ಸುರೇಶ್​ ಅಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts