ಮಣ್ಣಲ್ಲಿ ಮಣ್ಣಾದ ಸುರೇಶ್​ ಅಂಗಡಿ

suresh angadi
Published on

ದೆಹಲಿ: ಕೇಂದ್ರ ಸಚಿವ ಸುರೇಶ್​ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.

ಕರೊನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್​ ಅಂಗಡಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಮೃತಪಟ್ಟಿದ್ದರು. ದೆಹಲಿಯ ದ್ವಾರಕಾ ಸೆಕ್ಟರ್​ 24ರಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಹಾಗೂ ಕೋವಿಡ್​ ನಿಯಮದಂತೆ ನೆರವೇರಿಸಲಾಯಿತು.

ಸುರೇಶ್​ ಅಂಗಡಿ ಅಂತ್ಯಕ್ರಿಯೆ ವಿಧಿವಿಧಾನವನ್ನು ಬೆಳಗಾವಿ ನಿವಾಸದಿಂದಲೇ ಆನ್​ಲೈನ್​ ಲೈವ್​ ಮೂಲಕ ಅವರ ತಾಯಿ ಸೋಮವ್ವ ವೀಕ್ಷಿಸುತ್ತ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಬೆಳಗಾವಿಯಲ್ಲೇ ಇದ್ದ ಸಚಿವರ ಹಿರಿಯ ಮಗಳು-ಮೊಮ್ಮಗಳು ಸೇರಿದಂತೆ ಕುಟುಂಬಸ್ಥರು ಗುರುವಾರ ಬೆಳಗ್ಗೆ ದೆಹಲಿಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಸಚಿವ ಜಗದೀಶ ಶೆಟ್ಟರ್​, ಡಿಸಿಎಂ ಲಕ್ಷ್ಮಣ್​ ಸವದಿ, ಅಣ್ಣಾ ಸಾಹೇಬ್​ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net