ಹಾಡಹಗಲಲ್ಲೇ ಯುವಕನನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

Kole
Published on

ಚೆನ್ನೈ: ನಾಲ್ವರು ದುಷ್ಕರ್ಮಿಗಳು ಹಾಡಹಗಲಲ್ಲೇ 28 ವರ್ಷದ ಯುವಕನೊಬ್ಬನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಬರ್ಬರ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ಬುಧವಾರ ನಡೆದಿದೆ.

ಗೋಕುಲ್​ ಮೃತ ದುರ್ದೈವಿ. ಅರಕ್ಕೋಣಂನ ಹೊಸ ಬಸ್​ ನಿಲ್ದಾಣ ಬಳಿಯ ಟಿಎಎಸ್​ಎಂಎಸಿಗೆ ತೆರಳುವಾಗ ಯುವಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಅವರಿಂದ ತಪ್ಪಿಸಿಕೊಂಡು ಓಡುವಾಗ ಬೆನ್ನತ್ತಿದ ದುಷ್ಕರ್ಮಿಗಳು ಗೋಕುಲನನ್ನು ಹಿಡಿದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.

ರಕ್ತಸಿಕ್ತ ದೇಹದಿಂದ ಬಿದ್ದು ಒದ್ದಾಡುತ್ತಿದ್ದ ಗೋಕುಲ್​ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.

ಆರೋಪಿಗಳನ್ನು ಇನ್ನು ಪತ್ತೆಹಚ್ಚಬೇಕಿದೆ. ಕೊಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹಳೆಯ ದ್ವೇಷ ಅಥವಾ ಪ್ರೇಮ ವಿಚಾರದ ಶಂಕೆ ವ್ಯಕ್ತವಾಗಿದೆ. ಗೋಕುಲ್​ ಶವವನ್ನು ಪರೀಕ್ಷೆಗಾಗಿ ಶವಗಾರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net