ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಲು ಮುಂದಾದ ಟಾಲಿವುಡ್ ನಟ ಚಿರಂಜೀವಿ

Chiranjeevi and Ramcharan Teja - Final
Published on

ಹೈದರಾಬಾದ್​: ಟಾಲಿವುಡ್​ನ ಹಿರಿಯ ನಟ ಚಿರಂಜೀವಿ ಈ ಹಿಂದೆ ತಮ್ಮ ಹೆಸರಲ್ಲಿ ಬ್ಲಡ್​ ಬ್ಯಾಂಕ್​ ಪ್ರಾರಂಭಿಸಿದ್ದರು. ಈಗ ಅವರು ತಮ್ಮ ಮಗ ರಾಮ್​ಚರಣ್​ ತೇಜ ಜತೆಗೆ ಸೇರಿಕೊಂಡು ಆಕ್ಸಿಜನ್​ ಬ್ಯಾಂಕ್​ಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದ್ದಾರೆ.

ಹೌದು, ಕರೊನಾ ಕೇಸ್​ಗಳಲ್ಲಿ ಹೆಚ್ಚಳ ಕಂಡ ಕಾರಣ, ಇಡೀ ದೇಶದಲ್ಲಿ ಆಕ್ಸಿಜನ್​ಗೆ ಬಹಳ ಬೇಡಿಕೆ ಇದೆ. ಇದಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೊರತೇನಲ್ಲ. ಈ ಎರಡೂ ರಾಜ್ಯಗಳಲ್ಲಿ ಆಕ್ಸಿಜನ್​ ಅಭಾವ ನೀಗಿಸುವುದಕ್ಕೆ ಅವರು ಆಕ್ಸಿಜನ್​ ಬ್ಯಾಂಕ್​ಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಈ ಬ್ಯಾಂಕ್​ಗಳನ್ನು ಚಿರಂಜೀವಿ ಅಭಿಮಾನಿಗಳ ಸಂಘ ನೋಡಿಕೊಳ್ಳಲಿದ್ದು, ಆಯಾ ಜಿಲ್ಲೆಗಳಲ್ಲಿ ಅಗತ್ಯವಿರುವವರಿಗೆ ಈ ಸಂಘದವರೇ ಆಕ್ಸಿಜನ್​ ಪೂರೈಸಲಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ಯಾರಿಗಾದರೂ ಆಮ್ಲಜನಕದ ಅಗತ್ಯಬಿದ್ದರೆ, ಅವರು ಚಿರಂಜೀವಿ ಅಭಿಮಾನಿಗಳ ಸಂಘವನ್ನು ಸಂಪರ್ಕಿಸಿ, ತರಿಸಿಕೊಳ್ಳಬಹುದಾಗಿದೆ.

ಚಿರಂಜೀವಿ ಚಾರಿಟಬಲ್​ ಟ್ರಸ್ಟ್​ನಡಿ ಈ ಆಕ್ಸಿಜನ್​ ಬ್ಯಾಂಕ್​ ಕಾರ್ಯ ನಿರ್ವಹಿಸಲಿದ್ದು, ಇನ್ನೊಂದು ವಾರದಲ್ಲಿ ಸ್ಥಾಪನೆಯಾಗಲಿದೆ. ಈ ಕುರಿತು ಚಿರಂಜೀವಿ ಚಾರಿಟಬಲ್​ ಟ್ರಸ್ಟ್​ನಿಂದ ಇಂದು ಟ್ವಿಟರ್​ನಲ್ಲಿ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net