ಸಮಾಜ ಸೇವೆಯಿಂದ ಬದುಕು ಸಾರ್ಥಕ : ಮಾಣಿಲ ಶ್ರೀ ಶುಭನುಡಿ

New Project (26)
Published on

ಕುಂಬಳೆ: ಸಮಾಜ ಸೇವೆಯೂ ಒಂದು ಪವಿತ್ರ ಕಾರ್ಯ. ಇಂಥ ಕಾರ್ಯವನ್ನು 39 ವರ್ಷಗಳಿಂದ ಜಾತಿ, ಮತ, ಭೇದವಿಲ್ಲದೆ ನಾಡಿನ ಜನತೆಗೆ ನೀಡಿದ ಚಿರಂಜೀವಿ ಕುಂಬಳೆ ಸಂಸ್ಥೆ ಇನ್ನು ಸಾಮಾಜಿಕ ಕಾರ್ಯದಲ್ಲಿಯೂ, ನಾಡಿನ ಜನತೆಯ ಮನದಲ್ಲಿಯೂ ಶಾಶ್ವತ ಚಿರಂಜೀವಿಯಾಗಿ ಮುನ್ನುಡಿ ಬರೆಯಲಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಶುಕ್ರವಾರ ರಾತ್ರಿ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಬೆಡಿ ಮಹೋತ್ಸವದಂಗವಾಗಿ ಕುಂಬಳೆಯ ಸಾಮಾಜಿಕ ಸಂಸ್ಥೆ ಚಿರಂಜೀವಿ ಕುಂಬಳೆ ಸಂಸ್ಥೆಯ 39ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಕೃಷ್ಣ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾಸ್ಪತ್ರೆಯ ಡಾ.ಹರಿಕಿರಣ್, ಡಾ.ಮೊಹಮ್ಮದ್ ಶರೀಫ್ ಹೊಸಂಗಡಿ, ಕುಂಬಳೆ ಗ್ರಾಪಂ ಉಪಾಧ್ಯಕ್ಷ ನಾಸೀರ್ ಮೊಗ್ರಾಲ್, ಕುಂಬಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ, ಕುಂಬಳೆ ಗ್ರಾಪಂ ಸದಸ್ಯ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಡಾ.ಶಾಂಭವಿ, ಯಕ್ಷಗಾನ ಕಲಾವಿದ ತಿಮಣ್ಣ ರೈ ಮದಂಡೂರು, ಡ್ರಮ್ಸ್‌ನಲ್ಲಿ ಸಾಧನೆ ಮೆರೆದ ರಿಯೋನ ಡಿ.ಸೋಜ, ಬಾಲ ಪ್ರತಿಭೆ ಗೆಹನ ಮತ್ತು ಕೊಡುಗೈ ದಾನಿ ಕೆ.ಕೆ ಶೆಟ್ಟಿ ಸನ್ಮಾನವನ್ನು ಅವರ ಪರವಾಗಿ ಸಹೋದರ ಮಂಜುನಾಥ ಆಳ್ವ ಸ್ವೀಕರಿಸಿದರು.

ಸಂಸ್ಥೆ ಕಾರ್ಯದರ್ಶಿ ನಾರಾಯಣ ಕುಂಬಳೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಪ್ರಜೇಶ್ ಗಟ್ಟಿ ವಂದಿಸಿದರು. ದಿವಾಕರ ಪ್ರತಾಪನಗರ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ. ಲಂಚು ಲಾಲ್ ನಿರ್ಮಾಣದ ಮೀರಾ ಚಿತ್ರ ತಂಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net