ಎಲಿಕಳ ಸೂರ್ಯನಾರಾಯಣ ಶರ್ಮಗೆ ಸನ್ಮಾನ

New Project (17)
Published on

ಬೆಳ್ತಂಗಡಿ: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಯಕ್ಷಗಾನ ಪ್ರದರ್ಶನ ಸಂದರ್ಭ ಕನ್ಯಾಡಿಯ ಯಕ್ಷಭಾರತಿ ಸಂಸ್ಥೆ ವತಿಯಿಂದ ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಹಿರಿಯ ಹವ್ಯಾಸಿ ಕಲಾವಿದ ಎಲಿಕಳ ಸೂರ್ಯನಾರಾಯಣ ಶರ್ಮ ಅವರನ್ನು ಗೌರವಿಸಲಾಯಿತು.

ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್ ಸನ್ಮಾನಿತರನ್ನು ಅಭಿನಂದಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಭುಜಬಲಿ ಧರ್ಮಸ್ಥಳ, ಸೀತಾರಾಮ ತೋಳ್ಪಡಿತ್ತಾಯ, ನರೇಂದ್ರ ಕುಮಾರ್ ಉಜಿರೆ, ಸಂಸ್ಥೆಯ ಟ್ರಸ್ಟಿಗಳಾದ ರತ್ನವರ್ಮ ಜೈನ್, ಹರೀಶ್ ರಾವ್ ಮುಂಡ್ರುಪ್ಪಾಡಿ, ಹರಿದಾಸ ಗಾಂಭೀರ ಮತ್ತು ಆಹ್ವಾನಿತ ಸದಸ್ಯ ಪುರಂದರ ಕಡೀರ ಉಪಸ್ಥಿತರಿದ್ದರು.

ಯಕ್ಷಭಾರತಿ ಸಂಚಾಲಕ ಮಹೇಶ ಕನ್ಯಾಡಿ ಸನ್ಮಾನ ಪತ್ರ ವಾಚಿಸಿದರು. ಶ್ರೀನಿವಾಸ ರಾವ್ ನಿರೂಪಿಸಿ ರುಕ್ಮಯ ಗೌಡ ವಂದಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net