ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸಮಾವೇಶ

New Project (20)
Published on

ಮಂಜೇಶ್ವರ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಘಟಕದ ಸಮಾವೇಶ ಹೊಸಂಗಡಿ ವ್ಯಾಪಾರಿ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಮಂಜೇಶ್ವರ ಘಟಕದ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಟಿ.ಎ. ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬದಿಯಡ್ಕ ಉದ್ಘಾಟಿಸಿದರು.

ತಾಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ ಉಪ್ಪಳ, ಕೋಶಾಧಿಕಾರಿ ಜಯ ದೇವದಾಸ್ ತೂಮಿನಾಡು, ಜತೆ ಕಾರ್ಯದರ್ಶಿ ಪ್ರೇಮಲತಾ ಉದ್ಯಾವರ ವರದಿ ವಾಚಿಸಿದರು. ಯೂನಿಟ್ ಕೋಶಾಧಿಕಾರಿ ಪುರುಷೋತ್ತಮ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಕುತ್ತನಾಡಿ ದಂಪತಿಗಳನ್ನು ಗೌರವಿಸಲಾಯಿತು. ಸಮಿತಿ ಸದಸ್ಯರಾದ ಕೃಷ್ಣ ಕೇದುಂಬಾಡಿ, ಗೀತಾ ಮಂಜೇಶ್ವರ, ಕಲಾವತಿ ಹೊಸಂಗಡಿ, ಸುಚಿತಾ ತೂಮಿನಾಡು, ಸ್ವಪ್ನಾ ಉದ್ಯಾವರ, ರೂಪಾ ಮೀಯಪದವು ಹಾಗೂ ಹೊಲಿಗೆ ಕಾರ್ಮಿಕರು ಭಾಗವಹಿಸಿದ್ದರು. ಕಾರ್ಯದರ್ಶಿ ಕುಮುದಾ ರಾಜ್ ಸ್ವಾಗತಿಸಿದರು. ಶರ್ಮಿಳಾ ವಿನಯ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net