

ಸುಬ್ರಹ್ಮಣ್ಯ: ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, ಉಳ್ಳಾಲ್ತಿ, ಮಹಿಷಂತಾಯ, ಪರಿವಾರ ದೈವಗಳ ದೈವಸ್ಥಾನ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಶುಕ್ರವಾರ ಉಳ್ಳಾಕುಲು ಉಳ್ಳಾಲ್ತಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಉದ್ಯಮಿ ಅಶೋಕ್ ಮೇಲ್ಪಾಡಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಭರತ್ ರಾಮತೋಟ, ಉತ್ಸವ ಸಮಿತಿ ಅಧ್ಯಕ್ಷ ಕುಸುಮಾಧರ ಕೆರೆಯಡ್ಕ, ಪ್ರಧಾನ ದೈವ ಪರಿಚಾರಕ ಚಂದ್ರಶೇಖರ ಕೋಡಿ, ಆಡಳಿತ ಮಂಡಳಿ, ಉತ್ಸವ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ಯುಗಾದಿಯಂದು ಗೊನೆ ಕಡಿಯುವುದು, ಏ.9ರಂದು ಸಂಜೆ ಭಂಡಾರ ತೆಗೆಯುವುದರ ಮೂಲಕ ಶ್ರೀ ಅರಸು ಉಳ್ಳಾಕುಲು ದೈವಗಳ ನೇಮೋತ್ಸವ ಪ್ರಾರಂಭಗೊಂಡು ಮರುದಿನ ಬೆಳಗ್ಗೆ ಉಳ್ಳಾಳ್ತಿ ಅಮ್ಮನವರ ನೇಮ, ಶ್ರೀ ಉಳ್ಳಾಕುಲು ದೈವ, ಪರಿವಾರ ದೈವಗಳ ನೇಮ, ರಾತ್ರಿ ಧರ್ಮದೈವ, ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.