ತೂಕ ಇಳಿಸಿಕೊಳ್ಳಲು ಉಪವಾಸವಿದ್ದು ಪ್ರಾಣ ಬಿಟ್ಟ ಯುವತಿ!

weightloss
Published on

ಚೀನಾ: ತೂಕ ಇಳಿಸೋದು ಸುಲಭವಲ್ಲ. ಅತಿಯಾದ ತೂಕ ಇಳಿಕೆ ನಮ್ಮ ಪ್ರಾಣಕ್ಕೆ ಕುತ್ತು ತರುತ್ತೆ. ಹೀಗೆ ಇಲ್ಲೊಬ್ಬಳು ತೂಕ ಇಳಿಕೆ ಮಾಡಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ.

ಚೀನಾದಲ್ಲಿ ಯುವತಿಯೊಬ್ಬಳು ತನ್ನ 90 ಕೆ.ಜಿ ತೂಕ ಕಳೆದುಕೊಳ್ಳುವ ಆತುರದಲ್ಲಿ ಪ್ರಾಣ ಬಿಟ್ಟಿದ್ದಾಳೆ. ಅಷ್ಟಕ್ಕೂ ನಡೆದದ್ದು ಏನು ಎಂಬುದನ್ನು ಆಕೆ ಕುಟುಂಬಸ್ಥರೆ ಸ್ಪಷ್ಟಪಡಿಸಿದ್ದಾರೆ.

21 ವರ್ಷದ ಕುಯಿಹುವಾ ಮೃತ ಯುವತಿ. ಓಕೆ ಚೀನಾ ಮೂಲದವಳು. ಆಕೆ 90 ಕೆ.ಜಿ ತೂಕ ಹೊಂದಿದ್ದಳು. ತೂಕ ಇಳಿಕೆಗೆ ಮುಂದಾದ ಕುಯಿಹುವಾ, ಕಠಿಣ ಪರಿಶ್ರಮಕ್ಕೆ ಇಳಿದಿದ್ದಳು.

ಕಸರತ್ತು, ವ್ಯಾಯಾಮದ ಜೊತೆ ಉಪವಾಸವಿದ್ದು ತೂಕ ಇಳಿಸಲು ಮುಂದಾಗಿದ್ದಳು. ಅದ್ರಲ್ಲಿ ಯಶಸ್ಸು ಕೂಡ ಕಂಡಿದ್ದಳು. ಕೇವಲ 2 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡಿದ್ದಳು. ಆದ್ರೆ ಆಕೆ ಈ ಪ್ರಯತ್ನವೇ ಮುಳುವಾಗಿದೆ.

ಕುಯಿಹುವಾ ಸತತ ತರಬೇತಿ ಪಡೆಯುತ್ತಿದ್ದಳು. ಅತಿ ಬಾರದ ವಸ್ತುಗಳನ್ನು ಎತ್ತುತ್ತಿದ್ದರು. ಡಯಟ್ ಮಾಡುವ ಕಾರಣ ಆಕೆಗೆ ತುಂಬಾ ಹಸಿವೆಯಾಗ್ತಿತ್ತು. ಅತಿಯಾದ ವರ್ಕ್ ಔಟ್ ಹಾಗೂ ಹಸಿವೇ ಕುಯಿಹುವಾ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net