More

    ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದ ಶ್ವಾನ ಪ್ರೇಮಿ ರೇಬೀಸ್‌ನಿಂದ ಸಾವು…

    ತಿರುವನಂತಪುರಂ: ನಮ್ಮ ಬಳಿ ಒಂದು ನಾಯಿ ಇದ್ದರೆ ನೀವು ಯಾವತ್ತಿಗೂ ಒಂಟಿ ಎಂಬ ಭಾವನೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲವೆಂದು ತಜ್ಞರು ಕೂಡ ಹೇಳುತ್ತಾರೆ. ಬೀದಿ ಶ್ವಾನಗಳನ್ನು ಪ್ರೀತಿಸುತ್ತಾ, ಆಹಾರ ನೀಡುತ್ತಾ ಸಾಕುವ ಜನರು ನಮ್ಮ ಮಧ್ಯೆ ಇದ್ದಾರೆ. ಹೀಗೇ ಬೀದಿ ನಾಯಿಗೆ ಆಹಾರವನ್ನು ನೀಡಿ ಸಲಹುತ್ತಿದ್ದ ಶ್ವಾನ ಪ್ರೇಮಿಯೊಬ್ಬರು ರೇಬೀಸ್‌ ಕಾಯಿಲೆಗೆ ಬಲಿಯಾಗಿದ್ದಾರೆ.

    ಸ್ಟೆಫಿನ್ ವಿ ಪಿರೇರಾ (49) ಮೃತ ಮಹಿಳೆ. ಈಕೆ ತಿರುವನಂತಪುರಂನ ಚಿರಾಯಿಂಕೀಝು ಮೂಲದವರು. ಬೀದಿ ನಾಯಿಗಳಿಗೆ ಸದಾ ಆಹಾರವನ್ನು ನೀಡುತ್ತಿದ್ದ ಈಕೆ ಸಾವನ್ನಪ್ಪಿದ್ದಾಳೆ.

    ಇತ್ತೀಚೆಗೆ ಅವರು ಬೀದಿ ನಾಯಿಗೆ ಆಹಾರವನ್ನು ನೀಡುವಾಗ, ನಾಯಿಯೊಂದು ಉಗುರುಗಳಿಂದ ಪರಚಿದೆ. ಆ ನಂತರ ಸ್ಟೆಫಿನ್ ವಿ.ಪಿರೇರಾ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ತೆಗೆ ದಾಖಲಿಸಲಾಗಿದೆ. ರೇಬೀಸ್ ರೋಗ ಲಕ್ಷಣವನ್ನು ಪತ್ತೆ ಹಚ್ಚಿದ್ದಾರೆ.

    ಇದನ್ನೂ ಓದಿ: ಒಂಟಿಯಾಗಿದ್ದ, ಮಹಿಳೆ ಬಾಯಿಗೆ ಬಟ್ಟೆ ತುರುಕಿದ! ಅಡುಗೆ ಕೋಣೆಯಲ್ಲಿ ಶವ ಪತ್ತೆ…

    ವೈದ್ಯರು ಹೇಗೆ ಬಂದು ಎಂದು ಕೇಳಿದಾಗ, ಬೀದಿ ನಾಯಿ ಪರಚಿದ ಬಗ್ಗೆ ಸ್ಟೆಫಿನ್ ಹೇಳಿದ್ದಾರೆ. ಕಳೆದ ಕೆಲವು ದಿನದಿಂದ ರೇಬೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. ಬೀದಿ ನಾಯಿಗಳ ಹಾವಳಿಯ ಆತಂಕದ ನಡುವೆಯೇ ಕೇರಳದಾದ್ಯಂತ ರೇಬೀಸ್ ಪ್ರಕರಣಗಳು ವರದಿಯಾಗುತ್ತಿವೆ.

    ಲಸಿಕೆ ಹಾಕದ ನಾಯಿಯಿಂದ ಕಚ್ಚಿಸಿಕೊಂಡರೆ, ರೇಬೀಸ್ ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಚಿಕಿತ್ಸೆ ನೀಡದಿದ್ದರೆ, ಸೋಂಕಿನ ಕೆಲವೇ ದಿನಗಳಲ್ಲಿ ಸಾವು ಕೂಡ ಸಂಭವಿಸಬಹುದು. ರೋಗಿ ರೇಬೀಸ್‌ಗೆ ತುತ್ತಾದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ರೇಬೀಸ್ ಎಂದರೆ ಗಂಭೀರವಾದ ವೈರಲ್ ಸೋಂಕು.

    ಪೊಲೀಸ್​ ಎದುರೇ ಹಲ್ಲೆ ಮಾಡಲು ಮುಂದಾದ ವಿದ್ಯಾರ್ಥಿಗಳು! ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಗೂಂಡಾಗಿರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts