China: 'ಯುದ್ಧಕ್ಕೆ ಸನ್ನದ್ಧರಾಗಿ': ಸೈನ್ಯಕ್ಕೆ ಜಿನ್‌ಪಿಂಗ್ ಕರೆ

Nation 2 Xi Jinping
Published on

ಬೀಜಿಂಗ್: ಈ ವಾರ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಸೈನ್ಯಕ್ಕೆ ಚೀನಾ(China)ದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ.

ತೈವಾನ್ - ಚೀನಾ ನಡುವೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್‌ನ ಬ್ರಿಗೇಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಸಿ ಈ ಸಲಹೆ ನೀಡಿದ್ದಾರೆ ಎಂದು ಆ ದೇಶದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಮಿಲಿಟರಿಯು "ಸಮಗ್ರವಾಗಿ ತರಬೇತಿ ಮತ್ತು ಯುದ್ಧದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಪಡೆಗಳು ಯಾವುದೇ ಸಂದರ್ಭದಲ್ಲಿ ಯುದ್ಧ ಸಾಮರ್ಥ್ಯ ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು " ಎಂದು ಕ್ಸಿ ಸೂಚಿಸಿದರು ಎಂದು ವರದಿ ಮಾಡಿದೆ.

ತೈವಾನ್ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಚೀನಾ, ಇತ್ತೀಚಿನ ವರ್ಷಗಳಲ್ಲಿ ಸ್ವತಂತ್ರ ಆಡಳಿತ ಹೊಂದಿರುವ ಆ ದ್ವೀಪ ರಾಷ್ಟ್ರದ ಸುತ್ತಲೂ ತನ್ನ ಬಲ ಪ್ರದರ್ಶನವನ್ನು ಹೆಚ್ಚಿಸಿದೆ. ಇತ್ತೀಚೆಗೆ ಬೀಜಿಂಗ್ ತೈವಾನ್ ಅನ್ನು ಸುತ್ತುವರಿಯಲು ಫೈಟರ್ ಜೆಟ್‌ಗಳು, ಡ್ರೋನ್‌ಗಳು, ಯುದ್ಧನೌಕೆಗಳು ಮತ್ತು ಕೋಸ್ಟ್ ಗಾರ್ಡ್ ಹಡಗುಗಳನ್ನು ನಿಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net