

ಚೆನ್ನೈ: ರಜನಿಕಾಂತ್ ಚಿತ್ರ(Rajinikanth Movie) ವೆಟ್ಟೈಯಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಸಂಗ್ರಹದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ಸಿನಿಮಾ ಬಿಡುಗಡೆಯಾದ 10 ದಿನಗಳಲ್ಲಿ ಕೋಟಿ ಕೋಟಿ ವ್ಯವಹಾರ ಮಾಡಿ ಪ್ರಪಂಚದಾದ್ಯಂತ ಅದ್ಭುತಗಳನ್ನು ಸೃಷ್ಟಿಮಾಡಿದೆ.
ರಜನಿಕಾಂತ್, ಅಮಿತಾಭ್ ಬಚ್ಚನ್, ರಿತಿಕಾ ಸಿಂಗ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಮುಂತಾದ ಚಲನಚಿತ್ರ ತಾರೆಯರು ನಟಿಸಿರುವ ವೆಟ್ಟೈಯಾನ್ ವಿಶ್ವದಾದ್ಯಂತ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಚಿತ್ರ ಅ.10ಕ್ಕೆ ಬಿಡುಗಡೆಯಾಗಿದ್ದು, ಈ 10 ದಿನಗಳಲ್ಲಿ ವಿಶ್ವಾದ್ಯಂತ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.
ವಿಶ್ಲೇಷಕ ಮನೋಬಾಲಾ ವರದಿ ಪ್ರಕಾರ ವೆಟ್ಟಯ್ಯನ್ ಎರಡನೇ ಶನಿವಾರ 21.65 ಕೋಟಿ ರೂ . ಸಂಗ್ರಹಿಸಿದೆ. ಇದು ಶುಕ್ರವಾರಕ್ಕಿಂತ ಸುಮಾರು 5 ಕೋಟಿ ರೂ. ಹೆಚ್ಚಾಗಿದೆ. ಈ ಅಂಕಿ-ಅಂಶಗಳನ್ನು ನೋಡಿದರೆ, ವಿದೇಶಗಳಲ್ಲಿಯೂ ಸಹ ರಜನಿಕಾಂತ್ ಅವರ ಚಿತ್ರ ಪ್ರೇಕ್ಷಕರ ಮೊದಲ ಆಯ್ಕೆಯಾಗಿ ಉಳಿದಿದೆ. ಸದ್ಯ ಚಿತ್ರದ ಒಟ್ಟು ಗಳಿಕೆ 339.81 ಕೋಟಿ ರೂ.ಗೆ ತಲುಪಿದೆ ಎನ್ನಲಾಗುತ್ತಿದೆ.