Naga Chaitanya: ಭಾವಿ ಪತ್ನಿಯೊಂದಿಗೆ ಮಿರರ್​ ಸೆಲ್ಫಿ.. ನೋ ಕಾಮೆಂಟ್ಸ್!​

naga
Published on

ಹೈದರಾಬಾದ್​: ನಾಗಚೈತನ್ಯ(Naga Chaitanya) ಇತ್ತೀಚೆಗೆ ತನ್ನ ಭಾವಿ ಪತ್ನಿಯೊಂದಿಗೆ ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಮಿರರ್​ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ. ಇದನ್ನು ನೆಟಿಜನ್‌ಗಳೊಂದಿಗೆ ಹಂಚಿಕೊಂಡಿದ್ದು, ವೈರಲ್​ ಆಗುತ್ತಿದೆ.

ವಿದೇಶದಲ್ಲಿರುವ ರೆಸ್ಟೊರೆಂಟ್‌ನಲ್ಲಿ ಮಾಣಿಗೆ ನಾಗ ಚೈತನ್ಯ ನೀಡಿದ ಫೋಟೋದಲ್ಲಿ ಶೋಭಿತಾ ಧೂಳಿಪಾಲ ಕಾಣಿಸಿಕೊಂಡಿದ್ದು, ಇವರಿಬ್ಬರು ಸಂಬಂಧದಲ್ಲಿದ್ದಾರೆ ಎಂಬ ಅಂಶ ಹೊರಬಿದ್ದಿದೆ.

ಇಬ್ಬರೂ ಎಲ್ಲಿಯೂ ಪ್ರತಿಕ್ರಿಯಿಸಲಿಲ್ಲ. ಚಿತ್ರ ಬಂದ ಮೂರು ತಿಂಗಳಲ್ಲೇ ಇಬ್ಬರ ನಿಶ್ಚಿತಾರ್ಥವೂ ಆಯಿತು. ಸದ್ಯದಲ್ಲೇ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ನಾಗಚೈತನ್ಯ ಇತ್ತೀಚೆಗೆ ತನ್ನ ಭಾವಿ ಪತ್ನಿಯೊಂದಿಗೆ ಇರುವ ಮಿರರ್​ ಸೆಲ್ಫಿಯನ್ನು ನೆಟಿಜನ್‌ಗಳೊಂದಿಗೆ ಹಂಚಿಕೊಂಡಿದ್ದಾರೆ.

ಇದರಲ್ಲಿ ಇಬ್ಬರೂ ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಾಗ ಚೈತನ್ಯ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಆದರೆ ಅವರು ಈ ಫೋಟೋಗೆ ಕಾಮೆಂಟ್‌ಗಳ ವಿಭಾಗವನ್ನು ಆಫ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದೆ.

ನಾಗಚೈತನ್ಯ-ಶೋಭಿತಾ ಬಹಳ ಹಿಂದಿನಿಂದಲೂ ಸ್ನೇಹಿತರು. ಅವರು ಆ.8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಾಗ ಚೈತನ್ಯ ಸದ್ಯ ತಾಂಡೇಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಪೊನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಮಿಂಚಿದ್ದ ಶೋಭಿತಾ ಮಂಕಿ ಮೆನ್ ಎಂಬ ಇಂಗ್ಲಿಷ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಪ್ರಸ್ತುತ ಈ ಚೆಲುವೆ ಲವ್- ಸಿತಾರಾ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net