ಮಕ್ಕಳಿಗೆ ಇರಲಿ ಹಕ್ಕುಗಳ ಅರಿವು: ರಫೀಕ್ ದರ್ಬೆ ಹೇಳಿಕೆ

Ism_Karyagara
ಮಕ್ಕಳ ಹಕ್ಕುಗಳ ಮಾಹಿತಿ ಕಾರ್ಯಾಗಾರದಲ್ಲಿ ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿದರು. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ನಯನಾ ರೈ, ದ.ಕ.ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು, ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ವಿದ್ಯಾರ್ಥಿಗಳು ಗೊಂದಲಗಳಿಗೆ ಕಾರಣವಾಗುವ ವಿಚಾರದ ಕಡೆಗೆ ಗಮನಹರಿಸದೆ ಪಾಠಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಲಿಕೆಯ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಕಾನೂನು ತೊಡಕುಗಳ ಬಗ್ಗೆ ಅರಿತುಕೊಂಡು ಪಾಲನೆ ಮಾಡಬೇಕಿದೆ ಎಂದು ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಹೇಳಿದರು.

ಸರ್ವೆ ಗ್ರಾಮದ ಭಕ್ತಕೋಡಿ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ಎಸ್‌ಡಿಎಂಸಿ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ‘ಮಕ್ಕಳ ಹಕ್ಕುಗಳ ಮಾಹಿತಿ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ನಯನಾ ರೈ ಮಕ್ಕಳು ಲೈಂಗಿಕ ಸಮಸ್ಯೆಗೆ ಒಳಾಗಾಗುವ ಸಂದರ್ಭ ಬಂದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷೆ ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ಮಕ್ಕಳಿಗಾಗಿರುವ ಕಾನೂನುಗಳು ಏನನ್ನು ಹೇಳುತ್ತಿದೆ. ಮಕ್ಕಳ ಜಬಾಬ್ದಾರಿಗಳು ಏನು ಎಂಬುವುದರ ಕುರಿತು ಮಾಹಿತಿ ನೀಡಿದರು.

ಶಿಕ್ಷಣ ಸಂಪನ್ಮೂಲ ಕೇಂದ್ರದ ವತ್ಸಲಾ ನಾಯಕ್ ಮಾತನಾಡಿ, ಯಾರೋ ವ್ಯಕ್ತಿ ಅಥವಾ ಸಾರ್ವಜನಿಕರಿಂದಾಗಿ ಸಮಸ್ಯೆಗಳು ಎದುರಾದಾಗ ಮತ್ತು ಅನಗತ್ಯ ಗೊಂದಲಗಳು ಸೃಷ್ಟಿಯಾದಾಗ ಸಂಬಂಧಪಟ್ಟವರಿಗೆ ತಿಳಿಸಬೇಕು. ಕಾನೂನು ಪಾಲನೆಯ ಕಡೆಗೆ ಮಕ್ಕಳು ಹೆಚ್ಚಿನ ಗಮನ ಹರಿಸಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷರೂ ಆದ ದ.ಕ.ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು, ಸದಸ್ಯರಾದ ಹಮೀದ್ ಮಾಂತೂರು, ಭಾಸ್ಕರ, ಪ್ರೇಮಲತಾ ಕುದ್ಮಾರ್, ಸುಮತಿ ಕುದ್ಮಾರ್, ಎಸ್‌ಜಿಎಂ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಸೋಮಶೇಕರ್ ಉಪಸ್ಥಿತರಿದ್ದರು. ರಕ್ಷಿತಾ ರೈ ಸ್ವಾಗತಿಸಿದರು. ಮಧು ಶ್ರೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net