More

  ಮೌಢ್ಯಕ್ಕೆ ಮಗು ಬಲಿ ಪ್ರಕರಣ​: ಕೊನೆಗೂ ಮನೆ ಸೇರಿದ ಬಾಣಂತಿ, ಇದನ್ನು ಮೊದಲೇ ಮಾಡಿದ್ದರೆ ಮಗು ಉಳಿಯುತ್ತಿತ್ತು

  ತುಮಕೂರು: ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವರು ಮೌಢ್ಯಕ್ಕೆ ಶರಣಾಗಿರುವುದು ದುರಂತದ ಸಂಗತಿ. ಇದೇ ಮೌಢ್ಯದ ಕಾರಣ ತುಮಕೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನಿಂದ ಹೊರಗೆ ಇಡಲಾಗಿತ್ತು. ಗೊಲ್ಲರ ಸಂಪ್ರದಾಯದಂತೆ ಒಂದು ತಿಂಗಳು ಬಾಣಂತಿ ಮತ್ತು ಮಗು ಊರಿನಿಂದ ಹೊರಗೆ ಇರಬೇಕಿತ್ತು. ಆದರೆ, ನಿರಂತರ ಮಳೆಯಿಂದ ವಾತಾವರಣ ಥಂಡಿಯಾಗಿದ್ದು, ವಿಪರೀತ ಶೀತದಿಂದ ಬಳಲಿದ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ನಿನ್ನೆ ಮೃತಟ್ಟಿತು.

  ಇದನ್ನೂ ಓದಿ: ಅಮೆರಿಕದಲ್ಲಿ ನಡೆಯುತ್ತಿದೆ UFO ಸಂಬಂಧಿತ ವಿಚಾರಣೆ! ಗುಪ್ತಚರ ಅಧಿಕಾರಿ ಹೇಳಿದ್ದೇನು?

  ಶೀತ ಹೆಚ್ಚಾಗಿದ್ದರಿಂದ ಮೊದಲು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಯೇ ಪ್ರಾಣಬಿಟ್ಟಿತು. ನಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ ಹಾಗೂ ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ಮಗು ಮತ್ತು ತಾಯಿ ವಾಸವಿದ್ದರು. ಹೀಗಾಗಿ ಮಗುವಿಗೆ ಶೀತ ಕಾಣಿಸಿಕೊಂಡಿತ್ತು.

  ಮನಸ್ಥಿತಿ ಮಾತ್ರ ಬದಲಾಗಲಿಲ್ಲ

  ಮಗು ಕಳೆದುಕೊಂಡರೂ ಕುಟುಂಬದ ಮನಸ್ಥಿತಿ ಮಾತ್ರ ಬದಲಾಗಲಿಲ್ಲ. ಆ ಬಳಿಕವೂ ಬಾಣಂತಿಯನ್ನು ಊರೊಳಗೆ ಸೇರಿಸಲಿಲ್ಲ. ಆದರೆ, ಮನೆಯೊಳಗೆ ಸೇರಿಸಿಕೊಳ್ಳುವಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಆರೋಗ್ಯ ಅಧಿಕಾರಿಗಳು ಮನವೊಲಿಸಿದ್ದರು. ರಾತ್ರಿ 8 ಗಂಟೆಯ ಒಳಗೆ ಮನೆಗೆ ಸೇರಿಸುವುದಾಗಿ ಕುಟುಂಬಸ್ಥರು ನಿನ್ನೆ ಹೇಳಿದ್ದರು. ಪೂಜೆ, ಪುನಸ್ಕಾರಗಳನ್ನು ಮಾಡಿದ ಬಳಿಕ ಬಾಣಂತಿಯನ್ನು ಮನೆಯೊಳಗೆ ಕರೆದುಕೊಳ್ಳುತ್ತೇವೆ ಎಂದಿದ್ದರು. ಆದರೆ, ಅಧಿಕಾರಿಗಳು ವಾಪಸಾಗುತ್ತಿದ್ದಂತೆ ಹಳೇ ಪದ್ಧತಿಗೆ ಕುಟುಂಬಸ್ಥರು ಜೋತು ಬಿದಿದ್ದರು. ಸತತ ಮಳೆ ಸುರಿಯುತ್ತಿದ್ದರೂ ಬಾಣಂತಿ ಮಹಿಳೆ ವಸಂತ ಮಾತ್ರ ಊರ ಹೊರಗಿನ ಗುಡಿಸಲಲ್ಲಿ ಇರಬೇಕಾಯಿತು.

  ಬದಲಾದ ಮನಸ್ಸು

  ಕೊನೆಗೂ ಬಾಣಂತಿ ವಸಂತಾಳನ್ನು ಮನೆಯೊಳಗೆ ಸೇರಿಸುವಲ್ಲಿ ಇಂದು ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಾಣಂತಿಯನ್ನು ಶಾಸ್ತ್ರೋಕ್ತವಾಗಿ ಸಿದ್ದೇಶ್​ ಕುಟುಂಬ ಮನೆಯೊಳಗೆ ಬರಮಾಡಿಕೊಂಡಿತು. ಕೊನೆಗೂ ಮನಸ್ಸು ಬದಲಿಸಿ, ಮೌಢ್ಯಾಚಾರಣೆಯನ್ನು ಬದಿಗೊತ್ತಿ ಬಾಣಂತಿಯನ್ನು ಕುಟುಂಬಸ್ಥರು ಮನೆ ಒಳಗೆ ಬರಮಾಡಿಕೊಂಡರು.

  ಇದನ್ನೂ ಓದಿ: ಸೀಮಾ ಹೈದರ್​ಗೆ ನಕಲಿ ದಾಖಲೆಗಳನ್ನು ಮಾಡಿಕೊಟ್ಟ ಇಬ್ಬರು ಆರೋಪಿಗಳು ಅಂದರ್! ​

  ಈ ಕೆಲಸವನ್ನು ಮೊದಲೇ ಮಾಡಿದ್ದರೆ ಮಗು ಸಹ ಉಳಿದುಕೊಳ್ಳುತ್ತಿತ್ತು. ನಮ್ಮ ಆಚರಣೆಗಳು ಒಬ್ಬರಿಗೆ ಒಳಿತಾಗುವ ನಿಟ್ಟಿನಲ್ಲಿ ಇರಬೇಕು ಹೊರತು ಒಬ್ಬರ ಪ್ರಾಣ ಕಸಿಯುವಂತಾಗಬಾರದು. ಇನ್ನಾದರೂ ಇಂತಹ ಮೌಢ್ಯಗಳಿಗೆ ಕಡಿವಾಣ ಹಾಕಲೇಬೇಕಿದೆ. (ದಿಗ್ವಿಜಯ ನ್ಯೂಸ್​)

  ಟ್ರಾಫಿಕ್ ಕಿರಿ ಕಿರಿ; ಕಚೇರಿಗೆ ಹೋಗುವವರು ಸ್ವಂತ ಕಾರು ಬಳಸಬಾರದು ಎಂದ ಸೈಬರಾಬಾದ್ ಪೊಲೀಸರು

  PHOTO VIRAL | ಸ್ಯಾಂಡಲ್​ವುಡ್​ ನಟರನ್ನು ಮಹಾಭಾರತದ ಪಾತ್ರಗಳಂತೆ ಚಿತ್ರಿಸಿದ AI!

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts