

ಚಿಕ್ಕಮಗಳೂರು: ಅನಾಮಧೇಯ ಮಹಿಳೆ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಸೂಟ್ಕೇಸ್ ಇಟ್ಟಿ ತೆರಳಿರುವುದು ನಗರದ ಜನರಲ್ಲಿ ಭೀತಿಗೆ ಕಾರಣವಾಗಿದೆ.
ಮಹಿಳೆ ಮರದ ಕೆಳಗೆ ಸೂಟ್ಕೇಸ್ ಇಟ್ಟು ನಾಪತ್ತೆಯಾಗಿದ್ದಾರೆ. ಈ ದೃಶ್ಯ ಸ್ಥಳದದಲ್ಲಿ ಇದ್ದ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಶ್ವಾನದಳ ಕೂಡ ತೆರಳಿ ಪರಿಶೀಲನೆ ನಡೆಸಿತು.