More

    ಲಾಕ್​ಡೌನ್​ ಬೇಡವೇ? ಪ್ರತಿವಾರ ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ..!

    ಇಡೀ ಜಗತ್ತು ಕರೊನಾ ವಿರುದ್ಧ ಹೋರಾಟದಲ್ಲಿ ತೊಡಗಿದೆ. ಈ ವೈರಸ್​ ಹರಡದಂತೆ ತಡೆಯಲು ಸದ್ಯಕ್ಕಂತೂ ಯಾವುದೇ ಲಸಿಕೆ ಲಭ್ಯವಿಲ್ಲ. ಆದರೆ, ಮನೆಯಲ್ಲಿದ್ದುಕೊಂಡು ಉಳಿದವರಿಂದ ದೂರವಿರುವುದೇ ಇದಕ್ಕೆ ಮದ್ದು. ಇದಕ್ಕಾಗಿ ಲಾಕ್​​ಡೌನ್​ ಅನಿವಾರ್ಯ.
    ಆದರೆ, ತಿಂಗಳುಗಟ್ಟಲೇ ಲಾಕ್​ಡೌನ್​ ಸ್ಥಿತಿಯನ್ನು ಯಾವ ದೇಶದ ಆರ್ಥಿಕತೆಯೂ ಸಹಿಸಿಕೊಳ್ಳುವುದು ಕಷ್ಟಸಾಧ್ಯ. ಹಾಗೆಂದು ಕರೊನಾ ಸೋಂಕು ವ್ಯಾಪಿಸುತ್ತಿದ್ದರೆ, ಅದನ್ನು ತಡೆಗಟ್ಟದೇ ಬದುಕುವುದು ಸಾಧ್ಯವಿಲ್ಲ.

    ಹೀಗಾಗಿ ಲಾಕ್​​ಡೌನ್​ ವಿಧಿಸದೇ ಕರೊನಾವನ್ನು ತಡೆಗಟ್ಟುವ ಉಪಾಯವನ್ನು ಬ್ರಿಟನ್​ ನಗರವೊಮದು ಕಂಡುಕೊಂಡಿದೆ. ಸದ್ಯ ಬ್ರಿಟನ್​ನಲ್ಲಿ 2.27 ಲಕ್ ಜನರಿಗೆ ಸೋಂಕು ತಗುಲಿದೆ ಹಾಗೂ 32 ಸಾವಿರ ಜನರು ಮೃತಪಟ್ಟಿದ್ದಾರೆ. ಅಲ್ಲಿನ ಸರ್ಕಾರ ಕೂಡ ಜೂನ್​ ಅಂತ್ಯದವರೆಗೆ ಲಾಕ್​ಡೌನ್​ ವಿಸ್ತರಿಸುವ ಚಿಂತನೆ ನಡೆಸಿದೆ.

    ಇದನ್ನೂ ಓದಿ; ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಯಾರೂ ಕಾರಣರಲ್ಲ…!

    ಆದರೆ, ಲಂಡನ್​ನಿಂದ 100 ಮೈಲಿ ದೂರವಿರುವ ನಾರ್ವಿಚ್​ ಪಟ್ಟಣದ ಜನರಿಗೆ ಈ ತೊಂದರೆಯೇ ಇಲ್ಲ. ಏಕೆಂದರೆ ಅಲ್ಲಿ ಲಾಕ್​​ಡೌನ್​ ವಿಧಿಸದಿರಲು ಸ್ಥಳೀಯಾಡಳಿತ ನಿರ್ಧರಿಸಿದೆ. ಅದರ ಬದಲು, ಅಲ್ಲಿರುವ 1.40 ಲಕ್ಷ ಜನರಿಗೆ ಪ್ರತಿವಾರ ಕೋವಿಡ್​-19 ಪರೀಕ್ಷೆ ನಡೆಸಲಿದೆ. ಪೌರ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಹಾಗೂ ಪೊಳಿಸ್​ ಮೀಸಲು ಪಡೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಿದೆ. ಇಂಥದ್ದೊಂದು ಕ್ರಮ ಕೈಗೊಳ್ಳಲಿರುವ ಬ್ರಿಟನ್ನಿನ ಮೊದಲ ನಗರ ಎಂಬ ಹೆಗ್ಗಳಿಕೆಗೂ ನಾರ್ವಿಚ್​ ಪಾತ್ರವಾಗಲಿದೆ.

    ಕೋವಿಡ್​-19 ಕಾಯಿಲೆ ನಿಯಂತ್ರಕ್ಕೆ ಲಸಿಕೆ ದೊರೆಉಯುವವರೆಗೆ ಇದು ಜನರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಿದೆ. ಪ್ರತಿಯೊಬ್ಬರ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಒಂದು ವೇಳೆ ಸೋಂಕಿತರಾದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಿದೆ.

    ಇದನ್ನೂ ಓದಿ; 13 ವರ್ಷಗಳ ಕನಸಿನೊಂದಿಗೆ ಆತ ಹುಟ್ಟೂರಿಗೆ ಕೊಂಡೊಯ್ದದ್ದು ಏನು?

    ಮೂರು ತಿಂಗಳವರೆಗೆ ಪ್ರತಿವಾರ ಪ್ರತಿಯೊಬ್ಬರನ್ನೂ ಕೋವಿಡ್​ ಟೆಸ್ಟ್​ಗೆ ಒಳಪಡಿಸಲು ಅಂದಾಜು 18 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೇ, ಸೌತ್​ ಹ್ಯಾಂಪ್ಟನ್​ ನಗರವೂ ಕೂಡ ಇಂಥದ್ದೇ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ ಮುಂದಿರಿಸಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಇಡೀ ದೇಶಾದ್ಯಂತ ವಿಸ್ತರಿಸುವ ಚಿಂತನೆಯನ್ನು ಹೊಂದಲಾಗಿದೆ.

    ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts