More

    ಇದೇನು ವಿಚಿತ್ರ…! ವಿಷಾನಿಲ ದುರಂತಕ್ಕೆ ಯಾರೂ ಕಾರಣರಲ್ಲವಂತೆ..!

    ವಿಶಾಖಪಟ್ಟಣ: ವಿಷಾನಿಲಕ್ಕೆ ಬಲಿಯಾದವರು 11 ಜನ. ಸಂಕಷ್ಟಕ್ಕೆ ಗುರಿಯಾದವರು ಐದಕ್ಕೂ ಹೆಚ್ಚು ಹಳ್ಳಿಗಳ ಎರಡು ಸಾವಿರಕ್ಕೂ ಅಧಿಕ ಜನರು. 800ಕ್ಕೂ ಅಧಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆದು ಸಾವಿನ ಕುಣಿಕೆಯಿಂದ ಪಾರಾಗಿ ಬಂದಿದ್ದಾರೆ.

    ಇದಷ್ಟೇ ಅಲ್ಲ, ಐದು ಹಳ್ಳಿಗಳಲ್ಲಿ ಮನೆಯಲ್ಲಿದ್ದವರನ್ನೆಲ್ಲ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇಂಥದ್ದೊಂದು ಕಾರ್ಖಾನೆಯೇ ನಮ್ಮೂರಲ್ಲಿ ಬೇಡ ಎಂದು ಮೃತದೇಹಗಳೊಂದಿಗೆ ಜನರು ಆರ್​.ಆರ್​. ವೆಂಕಟಾಪುರಂ ಗ್ರಾಮದಲ್ಲಿರುವ ಎಲ್​.ಜಿ. ಪಾಲಿಮರ್ಸ್​ ಎದುರು ಪ್ರತಿಭಟನೆಯನ್ನು ನಡೆಸಿದ್ದಾಗಿದೆ. ಇದಾಗಿ ಎಂಟು ದಿನಗಳೇ ಕಳೆದಿವೆ. ಆಂಧ್ರಪ್ರದೇಶ ಸರ್ಕಾರ ಈ ಘಟನೆಯ ತನಿಖೆಗೆ ಉನ್ನತಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ.

    ಈ ನಡುವೆ, ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ಗೋಪಾಲಪಟ್ಟಣಂ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ ಪ್ರಕಾರ ದುರಂತಕ್ಕೆ ಯಾರೂ ಕಾರಣರಲ್ಲ… ಏಕೆಂದರೆ ಎಫ್​ಐಆರ್​ನಲ್ಲಿ ಕಂಪನಿಗೆ ಸಂಬಂಧಿಸಿದ ಯಾರ ಹೆಸರನ್ನು ಉಲ್ಲೇಖಿಸಲಾಗಿಲ್ಲ.
    ಇನ್ನೂ ವಿಚಿತ್ರವೆಂದರೆ, ದುರಂತಕ್ಕೆ ಸ್ಟೈರೀನ್​ ಅನಿಲ ಸೋರಿಕೆಯೇ ಕಾರಣವೆಂದು ಅಂದು ಹಿರಿಯ ಪೊಲೀಸ್​ ಅಧಿಕಾರಿಗಳು, ಜನಪ್ರತಿನಿಧಿಗಳು, ತಜ್ಞರಾದಿಯಾಗಿ ಎಲ್ಲರೂ ಹೇಳಿದ್ದರು. ಈ ಬಗ್ಗೆಯೂ ಎಫ್​ಐಆರ್​ನಲ್ಲಿ ಯಾವ ಮಾಹಿತಿ ಇಲ್ಲವಾಗಿದೆ.

    ಪೊಲೀಸ್​ ದಾಖಲೆಗಳ ಪ್ರಕಾರ ಹೇಳುವುದಾರೆ, ಮೇ 7ರಂದು ಬೆಳಗಿನ ಜಾವ 3.30ರಲ್ಲಿ ಎಲ್​.ಜಿ. ಪಾಲಿಮರ್ಸ್​ ಕಾರ್ಖಾನೆಯಿಂದ ಹೊಗೆ ಬರುತ್ತಿತ್ತು. ಅದು ಭಾರಿ ದುರ್ವಾಸನೆಯಿಂದ ಕೂಡಿತ್ತು. ಅಕ್ಕಪಕ್ಕದ ಹಳ್ಳಿಗಳಿಗೂ ಇದು ವ್ಯಾಪಿಸಿತು. ಅಲ್ಲದೇ, ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತು. ಜನರು ಭಯದಿಂದ ಮನೆ ಬಿಟ್ಟು ಓಡಲಾರಂಭಿಸಿದರು. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನುತ್ತದೆ.

    ಇದನ್ನೂ ಓದಿ; ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ 

    ಎಫ್​ಐಆರ್​ ದಾಖಲಿಸುವ ವೇಳೆಗಾಗಲೇ ಹತ್ತು ಜನರ ಸಾವು ಖಚಿತವಾಗಿದ್ದರೂ, 5 ಜನರ ಸಾವು ಎಂದು ಉಲ್ಲೇಖಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾರ್ಖಾನೆ ಆಡಳಿತ ಮಂಡಳಿಯ ಯಾರ ಹೆಸರನ್ನು ನಮೂದಿಸದೇ ಇರುವುದು ಇನ್ನಷ್ಟು ಶಂಕೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts